
0:00:00
2025-05-06
ಹಳಿಯಾಳದ ಯುವ ಕಾಂಗ್ರೆಸ್ ಮುಖಂಡ ಸುಂದರರಾಜ್ ಮಾದರ ಆತ್ಮಹತ್ಯೆ
News Details
ಹಳಿಯಾಳದ ಯುವ ಕಾಂಗ್ರೆಸ್ ಮುಖಂಡ ಸುಂದರರಾಜ್ ಮಾದರ ಅವರು ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಈ ನಿರ್ಧಾರಕ್ಕೆ ನಿಖರ ಕಾರಣ ಗೊತ್ತಾಗಿಲ್ಲ.
ಹಳಿಯಾಳ ಪಟ್ಟಣದ ಇಂದಿರಾನಗರ ಹಾಗೂ ಕೊಟ್ಟಣ ಬಡಾವಣೆಯಲ್ಲಿ ಸುಂದರರಾಜ್ ಮಾದರ (29) ಅವರು ವಾಸವಾಗಿದ್ದರು. ಭಾನುವಾರ ಸಂಜೆ ಕೊಟ್ಟಣ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲಿ ಅವರು ನೇಣು ಹಾಕಿಕೊಂಡಿದ್ದಾರೆ.
ಸುoದರರಾಜ್ ಅವರ ಪತ್ನಿ ಸುವರ್ಣಾ ಮಾದರ್ ಪುರಸಭೆ ಸದಸ್ಯೆ. ಸುಂದರರಾಜ್ ಅವರಿಗೆ ಒಬ್ಬ ಪುತ್ರ,ಪುತ್ರಿ, ತಾಯಿ ಇದ್ದಾರೆ. ಆದರೆ, ಆತ್ಮಹತ್ಯೆ ವೇಳೆ ಅವರು ಯಾರೂ ಮನೆಯಲ್ಲಿರಲಿಲ್ಲ. ಸಂಜೆ 5 ಗಂಟೆ ಆಸುಪಾಸಿನಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.