Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-06

ಭಟ್ಕಳದ ‘ರಾಯಲ್ ಆತಿಥ್ಯ’ ಹೋಟೆಲ್ ಅಡುಗೆ ಕೋಣೆಯಲ್ಲಿ ಬೆಂಕಿ, ಹೊಗೆ ಅಫರಾತಫರಿ

News Details

ಭಟ್ಕಳದ ಸಂಶುದ್ದೀನ್ ಸರ್ಕಲ್ ಬಳಿಯಿರುವ `ರಾಯಲ್ ಆತಿಥ್ಯ' ಹೋಟೆಲನ ಅಡುಗೆ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೊಗೆ ಹೋಗುವ ಚಿಮಣಿ ಹಾಗೂ ಎಣ್ಣೆ ಬಾಂಡಲಿಗೆ ಬೆಂಕಿ ತಗುಲಿದ್ದರಿಂದ ಅಪಾರ ಪ್ರಮಾಣದ ಹೊಗೆ ಹೊರಗಡೆ ಕಾಣಿಸಿತು.

ಸೋಮವಾರ ಮಧ್ಯಾಹ್ನ ವೇಳೆಗೆ ರಾಯಲ್ ಆತಿಥ್ಯ ವೆಜ್ ಹೊಟೇಲ್‌ನಲ್ಲಿ ಅಗ್ನಿ ಅವಘಡ ಉಂಟಾಯಿತು. ಹೊಟೇಲ್ ಮೇಲ್ಬಾಗದ ಚಿಮಣಿಯಲ್ಲಿ ಬೆಂಕಿಯ ಜ್ವಾಲೆ ನೋಡಿದ ಜನ ಅಲ್ಲಿನ ಸಿಬ್ಬಂದಿಗೆ ಮಾಹಿತಿ ನೀಡಿದರು. ಅದರ ಜೊತೆ ಜನರೇ ಹೊಟೇಲ್ ಒಳಗೆ ನುಗ್ಗಿ ಅಲ್ಲಿದ್ದ ಸಿಲೆಂಡರ್'ಗಳನ್ನು ಗ್ಯಾಸ್ ಒಲೆಯಿಂದ ಬೇರೆ ಮಾಡಿದರು. ಅಡುಗೆ ಕೋಣೆಯಲ್ಲಿದ್ದ ಸಿಲೆಂಡರ್'ಗಳನ್ನು ಹೊಟೇಲ್ ಸಿಬ್ಬಂದಿ ಹಿಡಿದು ಹೊರಹಾಕಿದರು.

ಅಗ್ನಿ ಅವಘಡದ ಮಾಹಿತಿ ಅರಿತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅಗ್ನಿಯ ಜ್ವಾಲೆಯನ್ನು ನಂದಿಸಿ ಇನ್ನಷ್ಟು ಅಪಾಯವಾಗುವುದನ್ನು ತಪ್ಪಿಸಿದರು. ಪರಿಸ್ಥಿತಿ ಹತೋಟಿಗೆ ಬಂದ ನಂತರ ಜನ ನಿರಾಳರಾದರು. ಅಗ್ನಿ ದುರಂತಕ್ಕೆ ಕಾರಣ ಗೊತ್ತಾಗಿಲ್ಲ. ಈ ಬಗ್ಗೆ ವಿವಿಧ ಕಡೆ ಚರ್ಚೆ ನಡೆಯುತ್ತಿದೆ.