
12:11:00
2025-05-07
ಕುಮಟಾದ ಆಕ್ಸಿಸ್ ಬ್ಯಾಂಕ್‌ಗೆ ಬೆಂಕಿ, ಹಲವು ಸಾಧನಗಳು ನಷ್ಟ
News Details
ಆಕ್ಸಿಸ್ ಬ್ಯಾಂಕ್ ಕುಮಟಾ ಶಾಖೆಯಲ್ಲಿ ಮಂಗಳವಾರ ನಸುಕಿನಲ್ಲಿ ಅಗ್ನಿ ಅವಘಡ ನಡೆದಿದೆ. ಕಂಪ್ಯುಟರ್, ಪ್ರಿಂಟರ್ ಸೇರಿ ಹಲವು ಸಾಮಗ್ರಿಗಳು ಸುಟ್ಟು ಕರಕಲಾಗಿದೆ. ಮಣಕಿ ಮೈದಾನದ ಎದುರಿರುವ ಸನ್ಮಾನ್ ಕಾಂಪ್ಲೆಕ್ಸ್ನಲ್ಲಿ ಈ ಬ್ಯಾಂಕ್ ಕಾರ್ಯನಿವಘಹಿಸುತ್ತಿತ್ತು. ಬ್ಯಾಂಕಿನ ಒಳಗಡೆಯಿಂದ ಹೊಗೆ ಬರುವುದನ್ನು ಸನ್ಮಾನ್ ಹೊಟೇಲ್ ಸಿಬ್ಬಂದಿ ನೋಡಿದರು. ತಕ್ಷಣ ಅವರು ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದರು. ಕುಮಟಾ ಅಗ್ನಿಶಾಮಕ ಠಾಣಾಧಿಕಾರಿ ತಮ್ಮಯ್ಯ ಗೊಂಡ ಅವರು ಅಲ್ಲಿಗೆ ಧಾವಿಸಿದರು. ಅಗ್ನಿಶಾಮಕ ಸಿಬ್ಬಂದಿ ಕುಮಾರ್ ಗೌಡ, ದಿನೇಶ್ ವೆಂಗುರೇಕರ್, ಮಹೇಶ್ ಶೆಟ್ಟಿ, ಗುರುನಾಥ್ ನಾಯಕ, ವಿಷ್ಣು ಗೌಡ, ಅಜಯ ನಾಯಕ ಶಾಖೆಯ ಬಾಗಿಲು ತೆಗೆಸಿ ಒಳಗೆ ನುಗ್ಗಿದರು. ಭಾರೀ ಪ್ರಮಾಣದಲ್ಲಿ ನೀರು ಹಾಯಿಸಿ ಬೆಂಕಿ ಆರಿಸಿದರು. ಅದಾಗಿಯೂ ಹಲವು ಕಂಪ್ಯುಟರ್, ಪ್ರಿಂಟರ್ ಜೊತೆ ಪೀಠೋಪಕರಣಗಳು ಸುಟ್ಟು ಕರಕಲಾದವು. ಹಣ ಹಾಗೂ ಲಾಕರ್'ನಲ್ಲಿದ್ದ ವಸ್ತುಗಳಿಗೆ ಯಾವುದೇ ಹಾನಿ ಆಗಲಿಲ್ಲ.