
ಶಿರಸಿಯಲ್ಲಿ ಗಾಂಜಾ ಪ್ರಕರಣ: ತಿಂಗಳು ಹಾಗೂ ಮಾರಾಟಗಾರ ಬಂಧನ
News Details
ಗಾಂಜಾ ಸೇವಿಸಿ ಅಲೆದಾಡುತ್ತಿದ್ದ ರಾಘವೇಂದ್ರ ಮಹೇಂದ್ರಕರ್ ಮತ್ತು ಪ್ರಜ್ವಲ್ ಹೊಂಗಲ್ ಎಂಬಾತರನ್ನು ಶಿರಸಿ ಮಾರುಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಗಾಂಜಾ ಮಾರಾಟ ಮಾಡುತ್ತಿದ್ದ ನಮಾಜಿಯಾ ವಡಗೇರಿ ಎಂಬಾತರನ್ನು ಬನವಾಸಿ ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಮೇ 7ರ ಒಂದೇ ದಿನ ಗಾಂಜಾ ಮಾರಾಟಗಾರ ಹಾಗೂ ಅದನ್ನು ಖರೀದಿದಾರರಿಬ್ಬರೂ ಜೈಲು ಸೇರಿದ್ದಾರೆ.
ಶಿರಸಿಯ ವಡಗೇರಿಯ ನಮಾಜಿಮಿಯಾ ಮೋದಿನಸಾಬ್ 490 ಗ್ರಾಂ ಗಾಂಜಾ ಹಿಡಿದು ಸಂಚರಿಸುವಾಗ ಬನವಾಸಿ ಪಿಎಸ್‌ಐ ಚಂದ್ರಕಲಾ ಪತ್ತಾರ್ ವಿಚಾರಣೆ ನಡೆಸಿದರು. ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ನಮಾಜಿಮಿಯಾ ಮೋದಿನಸಾಬ್'ರನ್ನು ಅವರು ಬಂಧಿಸಿದರು. ಅಂದಾಜು 35 ಸಾವಿರ ರೂ ಬೆಲೆಯ ಗಾಂಜಾ ಸರಕನ್ನು ವಶಕ್ಕೆಪಡೆದರು.
ಶಿರಸಿಯ ಲಯನ್ಸ್ ನಗರದ ರಾಘವೇಂದ್ರ ದಿನೇಶ್ ಮಹೇಂದ್ರಕರ್ ಮತ್ತು ಹನುಮಗಿರಿಯ ಪ್ರಜ್ವಲ್ ರವಿ ಹೊಂಗಲ್ ಯಲ್ಲಾಪುರ ರಸ್ತೆಯ ಸಹ್ಯಾದ್ರಿ ತಗ್ಗು ಹತ್ತಿರ ಗಾಂಜಾ ಸೇವಿಸುತ್ತಿದ್ದರು. ಮಾರುಕಟ್ಟೆ ಠಾಣೆ ಪೊಲೀಸರು ಅವರನ್ನು ವಶಕ್ಕೆಪಡೆದು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದರು. ಅಲ್ಲಿ ಅವರು ಗಾಂಜಾ ಸೇವಿಸಿರುವುದು ದೃಢವಾಗಿದ್ದರಿಂದ ಅವರನ್ನು ಬಂಧಿಸಿದರು.
ಗಾAಜಾ ಮಾರಾಟಗಾರ ಹಾಗೂ ಖರೀದಿದಾರರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.