
0:00:00
2025-05-08
ಕುಮಟಾದಲ್ಲಿ 25 ಅಡಿ ಬಾವಿಗೆ ಬಿದ್ದ ಜಾನುವಾರು ರಕ್ಷಣೆ
News Details
ಕುಮಟಾ ಪಟ್ಟಣದ ಚಿತ್ರಗಿಯ ಕಡೆಬಾಗದಲ್ಲಿ 25 ಅಡಿ ಆಳದ ಬಾವಿಗೆ ಬಿದ್ದ ಜಾನುವಾರನ್ನು ಅಗ್ನಿಶಾಮಕ ಸಿಬ್ಬಂದಿ ಮೇಲೆತ್ತಿದ್ದಾರೆ.
ಬಾವಿಯಲ್ಲಿ ಎತ್ತು ಬಿದ್ದಿರುವ ಬಗ್ಗೆ ಆ ಭಾಗದ ಜನ ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದರು. ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ತಿಮ್ಮಯ್ಯ ಎನ್ ಗೊಂಡ ಅವರು ತಮ್ಮ ಸಿಬ್ಬಂದಿ ಜೊತೆ ಅಲ್ಲಿಗೆ ಧಾವಿಸಿದರು. ರಾಘವೇಂದ್ರ ಪಟಗಾರ, ರಾಜೇಶ್ ಮಡಿವಾಳ, ವಿಷ್ಣು ಗೌಡ, ನಾಗರಾಜ್ ನಾಯ್ಕ್, ಅಜಯ್ ನಾಯ್ಕ್, ಪ್ರಮೋದ ನಾಯ್ಕ ಸಾಹಸ ಪ್ರದರ್ಶನ ಮಾಡಿದರು.
ಬಾವಿಯ ಆಳ-ಅಗಲ ಅಧ್ಯಯನ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಹಗ್ಗದ ಸಹಾಯಪಡೆದರು. ಆ ಪೈಕಿ ಪ್ರಮೋದ ನಾಯ್ಕ ಬಾವಿಗೆ ಇಳಿದು ಎತ್ತಿಗೆ ಹಗ್ಗ ಕಟ್ಟಿದರು. ಅದಾದ ನಂತರ ಎಲ್ಲಾ ಸಿಬ್ಬಂದಿ ಸೇರಿ ಹಗ್ಗ ಎಳೆದು ಎತ್ತನ್ನು ಮೇಲೆತ್ತಿದರು. ನಂತರ ಆ ಜಾನುವಾರನ್ನು ಮಾಲಕರಿಗೆ ಹಸ್ತಾಂತರಿಸಿದರು.