Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
11:40:00 2025-03-26

*ಊಟದ ತಾಟಿನಲ್ಲಿ ಮೊದುವೆಯ ಕರೆಯೋಲೆ*

News Details

*ಊಟದ ತಾಟಿನಲ್ಲಿ ಮೊದುವೆಯ ಕರೆಯೋಲೆ* ಮೊದಲ ಮಗಳ ಮದುವೆಗೆ ಬಿಳಿ ಬಣ್ಣದ ಕರವಸ್ತ್ರ ನೀಡಿ ಆಮಂತ್ರಣ ನೀಡಿದ್ದ ಶಿರಸಿಯ ಪಶುವೈದ್ಯ ಡಾ ಪಿ ಎಸ್ ಹೆಗಡೆ ಅವರು ಎರಡನೇ ಮಗಳ ಮದುವೆಗೆ ಊಟದ ತಾಟಿನಲ್ಲಿ ಆಮಂತ್ರಣ ಮುದ್ರಿಸಿ ಕರೆಯೋಲೆ ನೀಡುತ್ತಿದ್ದಾರೆ. ಶಿರಸಿ ತಾಲೂಕಿನ ಹೊನ್ನೆಗದ್ದೆಯ ಪರಮೇಶ್ವರ ಹೆಗಡೆ ಅವರು ಪಶು ವೈದ್ಯರು. ಬೇರೆ ಬೇರೆ ಊರುಗಳಲ್ಲಿ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿದ ಅವರು 1989ರಲ್ಲಿ ಶಿರಸಿಗೆ ಮರಳಿದರು. ಸರ್ಕಾರಿ ಸೇವೆಯನ್ನು ತ್ಯಜಿಸಿದ ನಂತರ `ಸಮರ್ಪಣಾ' ಎಂಬ ಹೆಸರಿನಲ್ಲಿ ಸ್ವಂತ ಪಶು ವೈದ್ಯಕೀಯ ಚಿಕಿತ್ಸಾಲಯ ಶುರು ಮಾಡಿದರು. ಸದ್ಯ ಟಿಎಸ್‌ಎಸ್ ರಸ್ತೆಯ ಮಾರುಕಟ್ಟೆ ಯಾರ್ಡಿನ `ಸಮರ್ಪಣಾ' ಚಿಕಿತ್ಸಾಲಯದಲ್ಲಿ ಅವರು ಮಾತಿಗೆ ಸಿಗುತ್ತಾರೆ. ಸದಾ ವಿಭಿನ್ನವಾಗಿ ಯೋಜಿಸುವ ಪಿ ಎಸ್ ಹೆಗಡೆ ಅವರು 2019ರಲ್ಲಿ ತಮ್ಮ ಮೊದಲ ಮಗಳ ಮದುವೆ ಮಾಡಿದರು. ಆಗ, ಎಲ್ಲರೂ ಬಳಸುವ ಕರ್ಚಿಪ್'ನಲ್ಲಿ ಆಮಂತ್ರಣ ಪತ್ರಿಕೆ ಮುದ್ರಿಸಿದ್ದರು. ಆ ವೇಳೆ ಅವರು ಮಾಡಿಸಿದ ಆಮಂತ್ರಣ ಅತ್ಯಂತ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಸದ್ಯ ಅವರು ತಮ್ಮ ಎರಡನೇ ಮಗಳ ಮದುವೆ ತಯಾರಿಯಲ್ಲಿದ್ದು, ಈಗಲೂ ಎಲ್ಲರೂ ಬಳಸುವ ಊಟದ ತಾಟಿನಲ್ಲಿ ಆಮಂತ್ರಣ ಮುದ್ರಿಸಿದ್ದಾರೆ. ಊಟದ ತಾಟಿನಲ್ಲಿ ಆಮಂತ್ರಣ ಮುದ್ರಿಸಬೇಕು ಎಂದು ಎಲ್ಲಾ ಕಡೆ ಓಡಾಡಿದ ಅವರಿಗೆ ಎಲ್ಲಿಯೂ ಸರಿಯಾದ ಸ್ಪಂದನೆ ಸಿಗಲಿಲ್ಲ. ಕೊನೆಯದಾಗಿ ಅವರು ಶಿರಸಿ ಹಳೆ ಬಸ್ ನಿಲ್ದಾಣ ಬಳಿಯ ಎಕ್ಸಿಸ್ ಬ್ಯಾಂಕ್ ಎದುರಿನ `ಗ್ರಾಫಿಕ್ಸ್' ಮಳಿಗೆಗೆ ಭೇಟಿ ನೀಡಿದರು. ತಮ್ಮ ವಿಚಾರವನ್ನು ಅಲ್ಲಿನ ವಿಶಾಲ ಹಾಗೂ ಆದರ್ಶ ಜೈವಂತ್ ಅವರ ಮುಂದಿಟ್ಟರು. ಬೇಡಿಕೆಗೆ ಅನುಗುಣವಾಗಿ `ಗ್ರಾಫಿಕ್ಸ್' ಮಳಿಗೆಯವರು ಊಟದ ತಾಟಿನ ಮೇಲೆ ಆಮಂತ್ರಣ ಮುದ್ರಿಸಿಕೊಟ್ಟರು. ಸರಿ ಸುಮಾರು 400 ಆಮಂತ್ರಣ ಪತ್ರಿಕೆಯನ್ನು ಪಿ ಎಸ್ ಹೆಗಡೆ ಅವರು ಮುದ್ರಿಸಿದ್ದಾರೆ. 10 ಇಂಚಿನ ಊಟದ ತಾಟಿನಲ್ಲಿ ಅಂದವಾದ ಆಮಂತ್ರಣ ಪತ್ರಿಕೆ ಮೂಡಿ ಬಂದಿದೆ. 85ರೂ ದರದಲ್ಲಿ ಈ ಆಮಂತ್ರಣ ಪತ್ರಿಕೆಯನ್ನು `ಗ್ರಾಫಿಕ್ಸ್' ಮಳಿಗೆಯವರು ಸಿದ್ದಪಡಿಸಿಕೊಟ್ಟಿದ್ದಾರೆ. ಆ ಆಮಂತ್ರಣ ಪತ್ರಿಕೆಗಳನ್ನು ಹಿಡಿದು ಪಿ ಎಸ್ ಹೆಗಡೆ ಅವರು ಮದುವೆ ಕರೆಯ ಶುರು ಮಾಡಿದ್ದಾರೆ.