Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-08

ದಾಳಿ ಭೀತಿಯಲ್ಲಿ ಮೀನುಗಾರರು ಸಮುದ್ರ ಸೈನಿಕರಾಗಿ ಸಜ್ಜು

News Details

ಪಾಪಿ ದೇಶ ಪಾಕಿಸ್ತಾನದವರು ಸಮುದ್ರದ ಮೂಲಕ ಭಾರತದ ಮೇಲೆ ದಾಳಿ ನಡೆಸುವ ಸಾಧ್ಯತೆ ಹಿನ್ನಲೆ ಕಡಲ ಮಕ್ಕಳಾದ ಮೀನುಗಾರರನ್ನು ಸಮುದ್ರ ಸೈನಿಕರಾಗಿ ಸಜ್ಜುಗೊಳಿಸಿದೆ. ದೇಶದಲ್ಲಿ 11098 ಕಿಮೀ ಕರಾವಳಿ ತೀರವಿದ್ದು, ಎಲ್ಲಿಯೇ ಅನುಮಾನಾಸ್ಪದ ವ್ಯಕ್ತಿಗಳು ಕಾಣಿಸಿದರೂ ತಕ್ಷಣ ಮಾಹಿತಿ ನೀಡುವಂತೆ ಮೀನುಗಾರರಿಗೆ ಮನವರಿಕೆ ಮಾಡಲಾಗಿದೆ. ಆ ಮೂಲಕ ಉಗ್ರರ ಮೇಲೆ ಕಣ್ಣಿಡಲು ಮೀನುಗಾರಿಕೆ ಜಾಲವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಇಲ್ಲಿನ ಮೀನುಗಾರಿಕಾ ದೋಣಿಗಳು ಅನೇಕ ಬಾರಿ ಗುಜರಾತಿನವರೆಗೆ ಮೀನು ಹಿಡಿಯಲು ಹೋಗುತ್ತವೆ. ಹಲವು ಬಾರಿ ಪಾಕಿಸ್ತಾನದವರು ಗಡಿ ರೇಖೆ ಉಲ್ಲಂಖನೆ ನೆಪದಲ್ಲಿ ಗುಜರಾತ್ ವ್ಯಾಪ್ತಿಯಲ್ಲಿಯೇ ಮೀನುಗಾರರನ್ನು ಬಂಧಿಸಿದೆ. ಹೀಗಾಗಿ ಮೀನುಗಾರರಿಗೆ ಸಹ ಪಾಕಿಸ್ತಾನದ ನಡವಳಿಕೆ ಬಗ್ಗೆ ಅಪಾರ ಸಿಟ್ಟಿದೆ. ಅನಗತ್ಯವಾಗಿ ಮೀನುಗಾರರನ್ನು ಬಂಧಿಸಿದ ಪಾಕಿಸ್ತಾನದ ನಡೆಯ ಬಗ್ಗೆ ಅನೇಕ ಮೀನುಗಾರರು ಆಗಾಗ ಆಕ್ರೋಶವನ್ನು ಹೊರಹಾಕಿದ್ದಾರೆ. ಅದಾಗಿಯೂ, ಗುಜರಾತ್ ಕಡೆ ಹೊರಟ ಬಡ ಮೀನುಗಾರರ ಬಂಧನ ಕಡಿಮೆಯಾಗಿಲ್ಲ.

ಇನ್ನೂ ಮೀನುಗಾರರು ಒಗ್ಗಟ್ಟಾಗಿದ್ದರೆ ಎಂಥ ಕಠಿಣ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. `ಹೋರಾಟಕ್ಕೂ ಸೈ.. ಹೊಡೆದಾಟಕ್ಕೂ ಜೈ' ಎನ್ನುವ ನೂರಾರು ನಿದರ್ಶನಗಳಿದ್ದು ಸದ್ಯ ಶತ್ರುಗಳನ್ನು ಮೆಟ್ಟಿನಿಲ್ಲಲು ಅಧಿಕಾರಿಗಳು ಮೀನುಗಾರರ ಸಹಕಾರ ಕೋರಿದ್ದಾರೆ. ನಿತ್ಯ ಆಳ ಸಮುದ್ರಕ್ಕೆ ತೆರಳಿ ಮೀನುಗಾರಿಕೆ ನಡೆಸುವ ಮೀನುಗಾರರಿಗೆ ಬೇರೆ ಬೇರೆ ದೇಶದ ಹಡಗುಗಳು ಎದುರಾಗುತ್ತಿದ್ದು, ಆಕ್ರಮಣಾಕಾರಿ ಸಂಗತಿಗಳು ಕಾಣಿಸಿದಲ್ಲಿ ತಕ್ಷಣ ಮಾಹಿತಿ ರವಾನಿಸುವಂತೆ ಅಧಿಕಾರಿಗಳು ಮೀನುಗಾರರಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ಅಧಿಕಾರಿಗಳು ಹಾಗೂ ಮೀನುಗಾರ ಮುಖಂಡರ ನಡುವೆ ಸಭೆ ನಡೆದಿದೆ. ಪಾಕಿಸ್ತಾನಕ್ಕೆ ಬುದ್ದಿ ಕಲಿಸಲು ಮೀನುಗಾರರು ಸಹ ಸಜ್ಜಾಗಿದ್ದಾರೆ.

ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತ ದಾಳಿ ನಡೆಸಿದೆ. ಹೀಗಾಗಿ ಪಾಕಿಸ್ತಾನ ಸಹ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಸಮುದ್ರ ಮಾರ್ಗದಲ್ಲಿ ನುಸುಳಿ ಸೇಡು ತೀರಿಸಿಕೊಳ್ಳುವ ಸಾಧ್ಯತೆಯಿರುವುದರಿಂದ ಅಲ್ಲಿಯೂ ಭಾರತ ಕಟ್ಟೆಚ್ಚರವಹಿಸಿದೆ. ಕರಾವಳಿ ತೀರದಲ್ಲಿ ನೌಕಾಸೇನೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಳ ಸಮುದ್ರ ಮೀನುಗಾರಿಕೆ ಬೋಟುಗಳ ಸಂಪರ್ಕವಿರುವುದರಿoದ ಮೀನುಗಾರರನ್ನು ಸರ್ಕಾರ ಸೈನಿಕರಂತೆ ಬಳಸಿಕೊಳ್ಳುವ ಸಿದ್ಧತೆ ನಡೆಸಿದೆ. ಕರ್ನಾಟಕದಲ್ಲಿ 343 ಕಿಮೀ. ಕರಾವಳಿ ತೀರದಲ್ಲಿ ಸುಮಾರು 4,700 ಆಳ ಸಮುದ್ರ ಮೀನುಗಾರಿಕೆ ಬೋಟುಗಳು ಮತ್ತು 10 ಸಾವಿರ ಮೇಲ್ಪಟ್ಟು ಯಾಂತ್ರಿಕ ಬೋಟುಗಳಿವೆ. ಅವೆಲ್ಲವೂ ಒಗ್ಗಟ್ಟಿನಿಂದ ಸಮುದ್ರದಲ್ಲಿ ಸಂಚರಿಸುವ ಅನುಮಾನಾಸ್ಪದ ಹಡಗುಗಳ ಮೇಲೆ ಕಣ್ಣಿಟ್ಟಿವೆ. ಜಲಮಾರ್ಗವಾಗಿ ನುಸುಳಬಹುದಾಗ ಉಗ್ರರನ್ನು ಸಮರ್ಥವಾಗಿ ಎದುರಿಸುವಷ್ಟು ಸಾಮರ್ಥ್ಯವೂ ಕರಾವಳಿಯ ಮೀನುಗಾರರಿಗಿದೆ.

ಸಮುದ್ರದಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ತೇಲುತ್ತಿದ್ದರೆ ಆ ಬಗ್ಗೆ ಮೀನುಗಾರಿಕಾ ಇಲಾಖೆಗೆ ಮಾಹಿತಿ ನೀಡುವುದು ಮೀನುಗಾರರ ಮುಖ್ಯ ಕೆಲಸ. ಇದರೊಂದಿಗೆ ಅಪರಿಚಿತ ಫೋನು, ಅನುಮಾನಾಸ್ಪದ ಬೋಟು-ವ್ಯಕ್ತಿಗಳ ಬಗ್ಗೆಯೂ ಮಾಹಿತಿ ನೀಡುವ ಹೊಣೆಯನ್ನು ಮೀನುಗಾರರಿಗೆವಹಿಸಲಾಗಿದೆ. ಈ ಬಗ್ಗೆ ಎಲ್ಲಾ ಬಂದರುಗಳಲ್ಲಿ ಅಧಿಕಾರಿಗಳು ಸಭೆ ನಡೆಸಿ, ಮೀನುಗಾರರ ವಿಶ್ವಾಸಗಳಿಸುತ್ತಿದ್ದಾರೆ.