
ಪ್ರಚೋದನಾತ್ಮಕ ಬರಹ ಪ್ರಕಟಿಸಿದ ಅಂಕಣಕಾರರ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿದ ಪೊಲೀಸರು
News Details
ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಬರಹ ಪ್ರಕಟಿಸಿದ ಅಂಕಣಕಾರರೊಬ್ಬರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗೋಕರ್ಣದ ರಥಬೀದಿಯಲ್ಲಿ ವ್ಯಾಪಾರ ಮಾಡಿಕೊಂಡಿರುವ ಹವ್ಯಾಸಿ ಬರಹಗಾರ ರಾಮಚಂದ್ರ ನಿರ್ವಾಹಣೇಶ್ವರ ಅವರು ಫೇಸ್ಬುಕ್ ಖಾತೆಯಲ್ಲಿ ತಮ್ಮ ಬರಹ ಪ್ರಕಟಿಸಿದ್ದರು. `ರಾಜ್ಯದ ಖರ್ಗೆಬಾವ ಮತ್ತು ದೆಲ್ಲಿ ರಾಜಕುಮಾರ ರಾಗಾ ಹಾಗೂ ಹೈದರಬಾದಿನ ಡಾನ್ ಓವೈಸಿ ಮನೆ ಮೇಲೆ ಒಂದೊoದು ಬಾಂಬು ಹಾಕಿ ಬಿಟ್ಟರೆ, ಮುಂದೆoದೂ ದೇಶದಲ್ಲಿ ಆ ರೀತಿ ಬಾಲ ಬಿಚ್ಚುವ ದರಿದ್ರ ಕೆಲಸ ಯಾರೂ ಮಾಡುತ್ತಿರಲಿಲ್ಲ' ಎಂದು ಅವರು ಬರೆದುಕೊಂಡಿದ್ದರು. ಅದಾದ ನಂತರ ಆ ಬರಹವನ್ನು ಅಳಸಿದ್ದರು.
ಆದರೆ, ಗೋಕರ್ಣ ಪೊಲೀಸ್ ಸಿಬ್ಬಂದಿ ವಸಂತ ನಾಯ್ಕ ಈ ಬರಹ ಗಮನಿಸಿದರು. ಹೀಗಾಗಿ ಆಂತರಿಕ ಗಲಭೆ ಉಂಟು ಮಾಡುವ ಉದ್ದೇಶದಿಂದ ರಾಮಚಂದ್ರ ನಿರ್ವಾಹಣೇಶ್ವರ ಅವರು ಈ ಬರಹ ಪ್ರಕಟಿಸಿದ್ದಾರೆ ಎಂದು ಅವರು ಮೇಲಧಿಕಾರಿಗಳಿಗೆ ವಿವರಿಸಿದರು. ರಾಜಕೀಯ ಪಕ್ಷದ ಮುಖಂಡರ ವಿರುದ್ಧ ದ್ವೇಷ ಭಾವನೆ ಹಬ್ಬಿಸುವ ಪ್ರಚೋದನಾಕಾರಿ ಸಂದೇಶ ಬರೆದಿರುವುದು ಹಾಗೂ ರಾಜಕೀಯ ಮುಖಂಡರಿಗೆ ಅವಮಾನಿಸಿರುವ ಕಾರಣ ನೀಡಿ ರಾಮಚಂದ್ರ ನಿರ್ವಾಹಣೇಶ್ವರ ಅವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿದರು.