
0:00:00
2025-05-10
ಹೊನ್ನಾವರ: ತೋಟದಲ್ಲಿ ತೆಂಗಿನಕಾಯಿ ಬಿದ್ದು ಕೃಷಿಕನ ದುರ್ಮರಣ
News Details
ಹೊನ್ನಾವರದಲ್ಲಿ ತೋಟಕ್ಕೆ ಹೋಗಿದ್ದ ಕೃಷಿಕರೊಬ್ಬರ ಮೇಲೆ ತೆಂಗಿನಕಾಯಿ ಬಿದ್ದಿದೆ. ಪರಿಣಾಮ ಅವರು ಅಲ್ಲಿಯೇ ಸಾವನಪ್ಪಿದ್ದಾರೆ.
ಹೊನ್ನಾವರದ ಹಳದಿಪುರ ಬಳಿಯ ಹಬ್ಬುಗದ್ದೆಯಲ್ಲಿ ಗೊಯ್ದು ಗೌಡ ಅವರು ವಾಸವಾಗಿದ್ದರು. ತಮಗೆ 80 ವರ್ಷವಾಗಿದ್ದರೂ ಅವರು ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಜೊತೆಗೆ ಕೂಲಿ ಕೆಲಸವನ್ನು ಸಹ ಅವರು ನಿಭಾಯಿಸುತ್ತಿದ್ದರು.
ಮೇ 7ರ ಸಂಜೆ ಅವರು ತಮ್ಮ ಮನೆ ಪಕ್ಕದ ಸೋಮು ಗೌಡ ಅವರ ತೋಟಕ್ಕೆ ಹೋಗಿದ್ದರು. ಅಲ್ಲಿನ ತೆಂಗಿನತೋಟದಲ್ಲಿರುವ ಬಾವಿಯಿಂದ ನೀರು ತಂದು ಅವರು ಉಪಯೋಗಿಸುತ್ತಿದ್ದರು. ತೋಟದಲ್ಲಿದ್ದ ತೆಂಗಿನಮರದ ಕಾಯಿ ಗೊಯ್ದು ಗೌಡ ಅವರ ತಲೆ ಮೇಲೆ ಬಿದ್ದಿತು. ಗೌಡರ ತಲೆ ಹಿಂದೆ ಭಾರೀ ಪ್ರಮಾಣದಲ್ಲಿ ಗಾಯವಾಯಿತು.
ಇದನ್ನು ಗಮನಿಸಿದ ಅವರ ಮಗ ಗೋಪಾಲ ಗೌಡ ತಂದೆಯನ್ನು ಹೊನ್ನಾವರ ಆಸ್ಪತ್ರೆಗೆ ಸಾಗಿಸಿದರು. ಆದರೆ, ಅಷ್ಟರೊಳಗೆ ಗೊಯ್ದು ಗೌಡ ಈ ಲೋಕದ ಯಾತ್ರೆ ಮುಗಿಸಿದ್ದರು.