Loading...
  • aksharakrantinagarajnaik@gmail.com
  • +91 8073197439
Total Visitors: 2788
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-10

ಗೋಕರ್ಣದಲ್ಲಿ ಮಾದಕ ವಸ್ತುಗಳ ಅಟ್ಟಹಾಸ, ಸರಬರಾಜುದಾರರು ಕೈಗೆಟುಕದೇ ಮುಂದುವರಿದ ಆರ್ಭಟ

News Details

ಪ್ರಸಿದ್ಧ ಪುಣ್ಯ ಹಾಗೂ ಪ್ರವಾಸಿ ತಾಣ ಗೋಕರ್ಣದಲ್ಲಿ ಎಲ್ಲೆಂದರಲ್ಲಿ ಮಾದಕ ವ್ಯಸನಗಳ ಮಾರಾಟ ನಡೆಯುತ್ತಿದೆ. ಮಾದಕ ವ್ಯಸನ ಸೇವಿಸುವವರ ವಿರುದ್ಧ ಪೊಲೀಸರು ನಿರಂತರ ಪ್ರಕರಣ ದಾಖಲಿಸುತ್ತಿದ್ದು, ಅದನ್ನು ಸರಬರಾಜು ಮಾಡುವವರನ್ನು ಮಾತ್ರ ಪತ್ತೆ ಮಾಡಲು ಸಾಧ್ಯವಾಗಿಲ್ಲ!

ಬೀಡಿ-ಸಿಗರೇಟಿನ ಚಟಕ್ಕೆ ಅಂಟಿಕೊAಡಿದ್ದ ಅನೇಕರು ಇದೀಗ ಗಾಂಜಾದ ಹಿಂದೆ ಬಿದ್ದಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು ಸೇರಿ ಯುವ ಸಮುದಾಯದವರು ಗಾಂಜಾದಿoದಾಗಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಗಲ್ಲಿ ಗಲ್ಲಿಯೂ ಗಾಂಜಾ ಮಾರಾಟವಾಗುತ್ತಿರುವ ಬಗ್ಗೆ ಮಾಹಿತಿಯಿದ್ದರೂ ಮೂಲ ಪೂರೈಕೆದಾರರು ಮಾತ್ರ ಸಿಕ್ಕಿ ಬಿದ್ದಿಲ್ಲ!

ಪ್ರವಾಸೋದ್ಯಮ ವಿಷಯದಲ್ಲಿ ಗೋಕರ್ಣ ಅಂತರಾಷ್ಟಿçÃಯ ಮಟ್ಟದಲ್ಲಿ ಬೆಳೆದಿದೆ. ಧಾರ್ಮಿಕ ಹಾಗೂ ನೈಸರ್ಗಿಕ ಪ್ರವಾಸಿಗರು ಇಲ್ಲಿ ಯಥೇಚ್ಚವಾಗಿ ಆಗಮಿಸುತ್ತಾರೆ. ಅಂಥ ಪ್ರವಾಸಿಗರನ್ನು ಮುಖ್ಯಗುರಿಯನ್ನಾಗಿಸಿಕೊಂಡು ಅಮಲು ಪದಾರ್ಥ ಮಾರಾಟವೂ ಜೋರಾಗಿದೆ. ಗಾಂಜಾ ಸೇವಿಸಿ ಸಿಕ್ಕಿಬಿದ್ದವರಲ್ಲಿ ಸ್ಥಳೀಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಗಾಂಜಾ ಪೂರೈಕೆದಾರರ ಬಗ್ಗೆ ಮಾತ್ರ ಸಿಕ್ಕಿಬಿದ್ದವರು ಎಲ್ಲಿಯೂ ಬಾಯ್ಬಿಟ್ಟಿಲ್ಲ. ಪೊಲೀಸರು ಸಹ ಅವರನ್ನು ಗಂಭೀರವಾಗಿ ವಿಚಾರಣೆಗೆ ಒಳಪಡಿಸಿಲ್ಲ!

ಸಾಲು ಸಾಲು ರಜೆ ಬಂತು ಎಂದರೆ ಗೋಕರ್ಣದ ತುಂಬೆಲ್ಲ ಅಮಲಿನ ಘಾಟು ಸಾಮಾನ್ಯ. ನಶೆಯ ಗುಂಗಿನಲ್ಲಿಯೇ ಸಾಕಷ್ಟು ಹೊಡೆದಾಟಗಳು ಇಲ್ಲಿ ನಡೆದಿವೆ. ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುವ ನಿಟ್ಟಿನಲ್ಲಿ ಮಾದಕ ವ್ಯಸನಗಳ ಮಾರಾಟ ಹಾಗೂ ಸೇವನೆ ನಡೆದಿದ್ದರೂ, ಅದನ್ನು ಸಂಪೂರ್ಣವಾಗಿ ತಡೆಯುವಲ್ಲಿ ಆಡಳಿತ ವಿಫಲವಾಗಿದೆ. ಹೀಗಾಗಿ ಪ್ರಭಾವಿಗಳ ಕುಮ್ಮಕ್ಕಿನಲ್ಲಿಯೇ ಮಾದಕ ವ್ಯಸನ ಮಾರಾಟ ಜಾಲ ಕಾರ್ಯನಿರ್ವಹಿಸುತ್ತಿರುವ ಬಗ್ಗೆಯೂ ಅನುಮಾನಗಳಿವೆ.

ಪೃಕೃತಿ ನೀಡಿದ ಕೊಡುಗೆಯಾದ ಕಡಲತೀರ ಹಾಗೂ ಪುರಾಣ ಪ್ರಸಿದ್ಧ ಪುಣ್ಯತಾಣವಾದ ಗೋಕರ್ಣ ಈಚೆಗೆ ಮಾದಕ ವ್ಯಸನಗಳನ್ನು ಸೆಳೆಯುವ ತಾಣವಾಗಿ ಬದಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವವರು ಯಾರು? ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.