
ಸುಪ್ರೀಂ ಆದೇಶ ಮೀರಿದ ಅಧಿಕಾರಿಗಳಿಗೆ ಮೆಚ್ಚುಗೆ – ಈಗ ಪ್ರಶಸ್ತಿ ನೀಡುವುದು ಮಾತ್ರ ಬಾಕಿ!
News Details
ಸುಪ್ರೀಂ ಕೋರ್ಟ ಆದೇಶ ಮೀರಿ ವರ್ತಿಸಿದ ಅಧಿಕಾರಿಗಳ ಕಾರ್ಯಕ್ಕೆ ಸರ್ಕಾರ ಭಾರೀ ಪ್ರಮಾಣದ ಮೆಚ್ಚುಗೆವ್ಯಕ್ತಪಡಿಸಿದೆ. ಕಾನೂನು ಮೀರಿದ ಅಧಿಕಾರಿಗಳಿಗೆ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸುವುದು ಮಾತ್ರ ಬಾಕಿಯಿದೆ!
ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ವಿಷಯದಲ್ಲಿ ಅಧಿಕಾರಿಗಳು ಎಡವಿದ್ದಾರೆ. ಸುಪ್ರೀಂ ಕೋರ್ಟ ಆದೇಶವನ್ನು ಅಧಿಕಾರಿಗಳು ಸ್ಪಷ್ಠವಾಗಿ ಉಲ್ಲಂಘಿಸಿದ್ದಾರೆ. ಇದರೊಂದಿಗೆ ಕಾಯ್ದೆಗೆ ವ್ಯತಿರಿಕ್ತವಾಗಿ ಅರಣ್ಯವಾಸಿಗಳ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಅಸ್ತಿತ್ವವೇ ಇಲ್ಲದ ಸಮಿತಿಯಿಂದ ಪುನರ್ ಪರಿಶೀಲನೆ ನೆಪದಲ್ಲಿ ಅತಿಕ್ರಮಣದಾರರನ್ನು ಅಲೆದಾಡಿಸುತ್ತಿದ್ದಾರೆ. ಆದರೆ, ಇಂಥ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿರುವ ಅಧಿಕಾರಿಗಳನ್ನು ಸರ್ಕಾರ ಅಧಿಕೃತ ಪತ್ರದ ಮೂಲಕ ಶ್ಲಾಘಿಸಿದೆ. ನಿಯಮ ಮೀರಿದ ಅಧಿಕಾರಿಗಳಿಗೆ ಸರ್ಕಾರದಿಂದ ಅಭಿನಂದನಾ ಪತ್ರವನ್ನು ನೀಡಲಾಗಿದೆ!
`ಉಪವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿ ಹಾಗೂ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಗಳಲ್ಲಿ ಚುನಾಯತ ಸದಸ್ಯರಿಲ್ಲ. ಹೀಗಾಗಿ ಅರಣ್ಯ ಹಕ್ಕು ತಿರಸ್ಕೃತ ಅರ್ಜಿ ಪುನರ್ ಪರಿಶೀಲನೆ ಕಾರ್ಯವನ್ನು ತಡೆಹಿಡಿಯಬೇಕು' ಎಂದು 2025ರ ಫೆ 12ರಂದು ಸರ್ಕಾರ ಆದೇಶಿಸಿತ್ತು. ಅದಾಗಿಯೂ, ವಿವಿಧ ಜಿಲ್ಲಾಧಿಕಾರಿಗಳು ಜನಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪುನರ್ ಪರಿಶೀಲನೆ ಕಾರ್ಯ ಮುಂದುವರೆಸಿದ್ದರು. ಹೀಗಾಗಿ ಸರ್ಕಾರದ ಆದೇಶ ಸರ್ಕಾರಿ ಅಧಿಕಾರಿಗಳಿಂದಲೇ ಉಲ್ಲಂಘನೆ ನಡೆದಿದೆ. ಅದಾಗಿಯೂ ಆದೇಶ ಉಲ್ಲಂಘಿಸಿದ ಅಧಿಕಾರಿಗಳನ್ನು ಸರ್ಕಾರವೇ ಅಭಿನಂದಿಸಿದೆ!
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲನಿ ರಜನೀಶ್ ಅವರು ಅರಣ್ಯ ಹಕ್ಕು ಅನುಷ್ಠಾನ ವಿಷಯವಾಗಿ ಹೊರಡಿಸಿದ ಅಭಿನಂದನಾ ಪತ್ರ ಇದೀಗ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ ಅವರ ಕಾರ್ಯ ಮೆಚ್ಚಿ ಶಾಲನಿ ರಜನೀಶ್ ಅವರು ಅಭಿನಂದನಾ ಪತ್ರ ಬರೆದಿದ್ದಾರೆ. `ಮಾಡಬೇಕಾದ ಕೆಲಸವನ್ನು ಸರಿಯಾಗಿ ಮಾಡದೇ ಇರುವ ಅಧಿಕಾರಿಗೆ ಅಭಿನಂದನೆ' ಸಲ್ಲಿಸಿರುವುದನ್ನು ನ್ಯಾಯವಾದಿ ರವೀಂದ್ರ ನಾಯ್ಕ ಖಂಡಿಸಿದ್ದಾರೆ. ಕಾನೂನಿನಲ್ಲಿ ಮಾನ್ಯತೆ ಇಲ್ಲದ ತೀರ್ಮಾಣ ತೆಗೆದುಕೊಂಡವರಿಗೆ ಸರ್ಕಾರ ಬೆನ್ನೆಲುಬಾಗಿರುವುದಕ್ಕೆ ಅವರು ಆಕ್ಷೇಪಿಸಿದ್ದಾರೆ.