
ಮದುವೆ ಬಳಿಕ ಹನಿಮೂನ್ ಬಿಟ್ಟು ಕರ್ತವ್ಯಕ್ಕೆ ಧಾವಿಸಿದ ಯೋಧ ಜಯಂತ್!
News Details
ಛತ್ತಿಸ್‌ಘಡದಲ್ಲಿನ ಬೆಟಾಲಿಯನ್'ನಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಸಿದ್ದಾಪುರದ ಯೋಧ ಜಯಂತ್ ಅವರಿಗೆ ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಕರೆ ಬಂದಿದೆ. ಮದುವೆ ಮುಗಿಸಿ ಪತ್ನಿ ಜೊತೆ ಊಟಿಗೆ ಹೊರಟಿದ್ದ ಅವರು ಹನಿಮೂನ್ ಮೊಟಕುಗೊಳಿಸಿ ದೇಶ ಸೇವೆಗೆ ಹಾಜರಾಗಿದ್ದಾರೆ.
ಮೇ 1ರಂದು ಜಯಂತ್ ಅವರಿಗೆ ಮದುವೆಯಾಯಿತು. ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳಿದ್ದವು. ಅದೆಲ್ಲವನ್ನು ಮುಗಿಸಿ ಅವರು ಪತ್ನಿ ಜೊತೆ ದೇವಾಲಯಕ್ಕೆ ತೆರಳಿದ್ದರು. ಅದಾದ ನಂತರ ಹನಿಮೂನ್'ಗಾಗಿ ಊಟಿಗೆ ತೆರಳಲು ನಿರ್ಧರಿಸಿದ್ದರು. ಇದಕ್ಕಾಗಿ ಪತ್ನಿ ಜೊತೆ ಮೈಸೂರಿನವರೆಗೆ ಹೋಗಿದ್ದರು. ಆ ವೇಳೆ ಅವರಿಗೆ ಫೋನ್ ಕರೆಯೊಂದು ಬಂದಿದ್ದು, ಮುಂದಿನ 15 ನಿಮಿಷದೊಳಗೆ ಅವರು ತಮ್ಮ ಹನಿಮೂನ್ ಪ್ಯಾಕೇಜ್ ರದ್ದುಗೊಳಿಸಿದರು.
ದೇಶ ಸೇವೆಗೆ ತುರ್ತು ಕರೆ ಬಂದಿರುವ ಬಗ್ಗೆ ಜಯಂತ್ ಅವರು ಪತ್ನಿಗೆ ಮನವರಿಕೆ ಮಾಡಿದರು. ಪತ್ನಿಯ ತವರುಮನೆಯವರು ಸಹ ಜಯಂತ ಅವರ ನಿರ್ಧಾರವನ್ನು ಖುಷಿಯಿಂದ ಸ್ವಾಗತಿಸಿದರು. ಮನೆ ದೇವರಿಗೆ ಕೈ ಮುಗಿದು ಅವರು ರಾಜಸ್ತಾನದ ರಾಯಪುರಕ್ಕೆ ಕರ್ತವ್ಯಕ್ಕಾಗಿ ತೆರಳುತ್ತಿದ್ದರು. ಸಿ ಆರ್ ಪಿ ಎಫ್ ತಂಡದಲ್ಲಿದ್ದ ಜಯಂತ ಅವರನ್ನು ಸಿದ್ದಾಪುರದ ಜನ ಸನ್ಮಾನಿಸಿ ಬೀಳ್ಕೊಟ್ಟರು. `ಯಶಸ್ವಿಯಾಗಿ ಊರಿಗೆ ಬನ್ನಿ' ಎಂದು ಎಲ್ಲರೂ ಒಕ್ಕೂರಲಿನಿಂದ ಶುಭಹಾರೈಸಿದರು.