Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-12

ಗೋಕರ್ಣದಲ್ಲಿ ಮದ್ಯದ మత్తಿನಲ್ಲಿ ಅಡ್ಡಾ ಡಿಕ್ಕಿ: 'ನ್ಯಾಯವಾದಿ' ಚಾಲಕನ ಕಾಟಕ್ಕೆ ಭಕ್ತರು ದಿಕ್ಕಾಪಾಲು!

News Details

ಕಂಠಪೂರ್ತಿ ಶರಾಬು ಕುಡಿದ ಕಾರು ಚಾಲಕನೊಬ್ಬ ಗೋಕರ್ಣದಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದು, ಆತನ ಕಾಟದಿಂದ ತಪ್ಪಿಸಿಕೊಂಡ ಭಕ್ತರು ದಿಕ್ಕಾಪಾಲಾಗಿ ಓಡಿ ಪ್ರಾಣ ಉಳಿಸಿಕೊಂಡರು. ಕೊನೆಗೆ ಪೊಲೀಸರು ಬಂದು ಆ ಚಾಲಕನನ್ನು ಹಿಡಿದುಕೊಂಡಿದ್ದು, `ನ್ಯಾಯವಾದಿ'ಯ ಹೆಸರು ಹೇಳಿದ್ದರಿoದ ಜನರು ತಬ್ಬಿಬ್ಬಾದರು!

ಕೆಎ 31 ನೊಂದಣಿಯ ಕಾರು ಚಾಲಕ `ನಾನು ನ್ಯಾಯವಾದಿ' ಎನ್ನುತ್ತಿದ್ದ. ಗೋಕರ್ಣ ಪ್ರವೇಶಿಸುವ ಮುನ್ನವೇ ಆತ ಗಂಜೀಗದ್ದೆ ಬಳಿ ರಿಕ್ಷಾಕ್ಕೆ ಕಾರು ಗುದ್ದಿದ್ದ. ಇದರಿಂದ ರಿಕ್ಷಾ ಚಾಲಕರು ಕಾರು ಬೆನ್ನತ್ತಿಕೊಂಡು ಬಂದಿದ್ದರು. ಸಾಲು ಸಾಲಾಗಿ ರಿಕ್ಷಾ ಬರುವುದನ್ನು ನೋಡಿದ ಕಾರು ಚಾಲಕ ಮದ್ಯದ ನಶೆಯಲ್ಲಿಯೂ ಬೆದರಿದ್ದ. ಹೀಗಾಗಿ ಇನ್ನಷ್ಟು ಜೋರಾಗಿ ಕಾರು ಓಡಿಸಿ, ತಪ್ಪಿಸಿಕೊಳ್ಳುವ ಭರದಲ್ಲಿದ್ದ. ಆದರೆ, ಆ ಯೋಜನೆ ಫಲಿಸಲಿಲ್ಲ.

ಶನಿವಾರವಾಗಿದ್ದರಿಂದ ಗೋಕರ್ಣದ ರಥಬೀದಿ ತುಂಬ ಜನರಿದ್ದರು. ಆ ಜನರ ನಡುವೆ ಕುಡುಕ ಕಾರು ನುಗ್ಗಿಸಿದ್ದ. ಆ ಕಾರು ವೃದ್ಧರೊಬ್ಬರಿಗೆ ಗುದ್ದುವುದಿದ್ದು, ಕೂದಲೆಳೆ ಅಂತರದಿoದ ಅವರು ಪಾರಾದರು. ಈ ವೇಳೆ ಕಾರಿನಲ್ಲಿದ್ದ ಮತ್ತೊಬ್ಬ ರಿಕ್ಷಾದವರನ್ನು ಸಮಾಧಾನ ಮಾಡಲು ತೆರಳಿದ್ದು, ಜನ ಕಾರು ಚಾಲಕನನ್ನು ಹಿಡಿದು ಬೈಗುಳ ಶುರು ಮಾಡಿದರು.

ಗದ್ದಲ ನೋಡಿ ಪೊಲೀಸರು ಅಲ್ಲಿಗೆ ಬಂದರು. `ನಾನು ನ್ಯಾಯವಾದಿ' ಎಂದ ಕಾರು ಚಾಲಕ ಕಾರಿಗೆ ಅಂಟಿಸಿದ ಸ್ಟಿಕರ್ ಕಾಣಿಸಿದ. ಪೊಲೀಸರ ಜೊತೆಯೂ ಕೆಲಕಾಲ ರಂಪಾಟ ನಡೆಸಿದ. ಕೊನೆಗೆ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದು ಕಾನೂನು ಪಾಠ ಮಾಡಿದರು. ಅದಾದ ನಂತರ ಬಿಟ್ಟು ಕಳುಹಿಸಿದರು.