
ಯಲ್ಲಾಪುರ: ಯಲ್ಲಾಪುರ ತಾಲೂಕಿನ ವಜ್ರಳ್ಳಿಯಲ್ಲಿ ಕಾಡು ಆನೆಗಳ ಉಪಟಳ ಶುರುವಾಗಿದೆ.
News Details
ಯಲ್ಲಾಪುರ: ಯಲ್ಲಾಪುರ ತಾಲೂಕಿನ ವಜ್ರಳ್ಳಿಯಲ್ಲಿ ಕಾಡು ಆನೆಗಳ ಉಪಟಳ ಶುರುವಾಗಿದೆ. ಕಾಡಿನಲ್ಲಿ ನೀರು-ಆಹಾರ ಕೊರತೆಯಿಂದಾಗಿ ಆನೆಗಳು ನಾಡಿಗೆ ಲಗ್ಗೆಯಿಟ್ಟಿವೆ. ಕಿರವತ್ತಿ-ಮದನೂರು ಭಾಗದಲ್ಲಿ ಆನೆ ಹಾವಳಿ ಸಾಮಾನ್ಯವಾಗಿದ್ದವು. ಆದರೆ, ಅದು ಇದೀಗ ವಜ್ರಳ್ಳಿ ಕಡೆಗೂ ವಿಸ್ತರಿಸಿದೆ. ವಜ್ರಳ್ಳಿಯ ದರ್ಭೆಜಡ್ಡಿ ಗಣೇಶ ಗಾಂವ್ಕರ ಅವರ ತೋಟಕ್ಕೆ ಮೂರು ಆನೆಗಳು ಆಗಮಿಸಿದೆ. ಅಲ್ಲಿನ ಬಾಳೆ ಸೇರಿ ವಿವಿಧ ಬೆಳೆಗಳನ್ನು ಹಾಳು ಮಾಡಿವೆ. ಈಗಾಗಲೇ ಚಿರತೆ, ನರಿ, ಮಂಗ, ಕಾಡುಕೋಣನ ಕಾಟಕ್ಕೆ ಆ ಭಾಗದ ಜನ ತತ್ತರಿಸಿದ್ದಾರೆ. ವನ್ಯಜೀವಿ ಹಾವಳಿಯಿಂದ ಫಸಲು ರಕ್ಷಿಸಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿದೆ. ಇದೀಗ ಆನೆ ಸಹ ಬೀಡು ಬಿಟ್ಟಿದ್ದರಿಂದ ಇಲ್ಲಿನ ರೈತರು ಭವಿಷ್ಯದ ಚಿಂತೆಯಲ್ಲಿದ್ದಾರೆ. ಜನ ವಸತಿ ಪ್ರದೇಶದ ಸಮೀಪವೇ ಆನೆ ಬಂದಿದ್ದರಿAದ ಜನರ ಭಯ ಇನ್ನಷ್ಟು ಹೆಚ್ಚಾಗಿದೆ. ಆರು ವರ್ಷದ ಹಿಂದೆ ಈ ಭಾಗದಲ್ಲಿ ಒಮ್ಮೆ ಆನೆಗಳ ಆಗಮನವಾಗಿತ್ತು. ಅದಾದ ನಂತರ ಇದೀಗ ಮೊದಲ ಬಾರಿ ಈ ಊರಿಗೆ ಆನೆ ಪ್ರವೇಶಿಸಿದ್ದು, ಜನರ ಆತಂಕ ಹೆಚ್ಚಾಗಿದೆ.