
ಬೀದಿನಾಯಿಗಳ ನಿಯಂತ್ರಣ ಕಾರ್ಯ ಶ್ಲಾಘನೀಯ – ಶಾಸಕ ದಿನಕರ ಶೆಟ್ಟಿ
News Details
ಪ್ರಾಣಿಗಳ ಆರೋಗ್ಯ ಕಾಳಜಿಯೊಂದಿಗೆ ಬೀದಿನಾಯಿಗಳ ನಿಯಂತ್ರಣದAತಹ ಕಾರ್ಯಕ್ರಮವನ್ನ ಖಾಸಗಿ ಸಂಸ್ಥೆ ಪ್ರವಾಸಿ ತಾಣದಲ್ಲಿ ನಡೆಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಅವರು ಸೋಮವಾರ ಕುಮಟಾದ ಬಂಕಿಕೊಡ್ಲದಲ್ಲಿ ಶಂಕರಪ್ರಸಾದ ಫೌಂಡೇಶನ್ ಮಿಷನ್ ರೇಬೀಸ್ ಸಹಯೋಗದಲ್ಲಿ ಹಮ್ಮಿಕೊಂಡ "ಎಂಟಿ -ರೇಬೀಸ್ ಮತ್ತು ಸ್ಟೆರಿಲೈಸೇಶನ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದರಂತೆ ಸ್ವಚ್ಚತೆಯ ಕಾರ್ಯವು ಯಶಸ್ವಿಯಾಗಲು ಸಂಸ್ಥೆಗಳ ಸಹಕಾರ ಅಗತ್ಯ ಎಂದ ಅವರು, ಜನ ಸ್ವಯಂ ಪ್ರೇರಿತವಾಗಿ ಪರಿಸರ ಸ್ವಚ್ಚತೆ ಬಗ್ಗೆ ಜಾಗೃತರಾಗಿ ಕೇಂದ್ರ ಸರ್ಕಾರದ ಸ್ವಚ್ಚ ಭಾರತ ಅಭಿಯಾನ ಸಫಲತೆ ಕಾರಣರಾಗ ಬೇಕು ಎಂದು ಕರೆ ನೀಡಿದರು.
ತಾಲೂಕಾ ಪಶುವೈದ್ಯಾಧಿಕಾರಿ ಡಾ.ವಿಶ್ವನಾಥ ಹೆಗಡೆ ರೇಬಿಸ್ ರೋಗ ಹಾಗೂ ಜಾನುವಾರುಗಳಿಗೆ ನಿಯಮಿತವಾಗಿ ಔಷಧೋಪಚಾರಗಳ ಬಗ್ಗೆ ವಿವರಿಸಿದರು.
ಹನೇಹಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಸಣ್ಣು ಗೌಡ, ನಾಡುಮಾಸ್ಕೇರಿ ಗ್ರಾಮ ಪಂಚಾಯತ ಅಧ್ಯಕ್ಷ ಈಶ್ವರ ಗೌಡ,ಶಂಕರ ಫೌಂಡೇಶನ ಸ್ವಾಮಿಯೋಗರತ್ನಾ, ಮಾಜಿ ತಾ. ಪಂ. ಸದಸ್ಯ ಮಹೇಶ ಶಟ್ಟಿ, ಮಿಷನ್ ರೇಬಿಸ್‌ನ ರಚನಾ , ಗ್ರಾ. ಪಂ. ಸದಸ್ಯ ರಾಜೇಶ ನಾಯಕ,ಚಂದ್ರಶೇಖರ ನಾಯ್ಕ,ಭಾರತೀ ಗೌಡ, ಜಗದೀಶ ಅಂಬಿಗ, ಶ್ರೀನಿವಾಸ ನಾಯಕ ಉಪಸ್ಥಿತರಿದ್ದರು. ಫೌಂಡೇಶನ ಕಾರ್ಯಕರ್ತರು, ಸ್ಥಳೀಯರು ಸಹಕರಿಸಿದರು. ನಂತರ ನಾಯಿ , ಜಾನುವಾರಿಗಳಿಗೆ ಸೂಕ್ತ ಚಿಕಿತ್ಸೆ ಮತ್ತಿತರ ಕಾರ್ಯ ನಡೆಯಿತು.