
13:06:00
2025-03-26
ಜಾತ್ರೋತ್ಸವದ ನಿಮಿತ್ತ ನಡೆಯಿತು ಅಂಕೆ ಹಾಕುವ ಕಾರ್ಯಕ್ರಮ ಗಮನ ಸೆಳೆಯಿತು ವಿಶೇಷ ಕಾರ್ಯಕ್ರಮ
News Details
ಜಾತ್ರೋತ್ಸವದ ನಿಮಿತ್ತ ನಡೆಯಿತು ಅಂಕೆ ಹಾಕುವ ಕಾರ್ಯಕ್ರಮ ಗಮನ ಸೆಳೆಯಿತು ವಿಶೇಷ ಕಾರ್ಯಕ್ರಮ ಅಮ್ಮನವರಿಗೆ ಬಿಟ್ಟ ಕುರಿ ಕೋಣಗಳ ಮೆರವಣಿಗೆ ಪ್ರತಿ ಮನೆಯಲ್ಲೂ ವಿಶೇಷ ಪೂಜೆ ಸಲ್ಲಿಕೆ ಊರಿನಲ್ಲಿ ಇಂದಿನಿಂದ ಜಾತ್ರೋತ್ಸವದ ಸಂಭ್ರಮ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ಏಪ್ರಿಲ್ ಒಂದರಿಂದ ನಡೆಯಲಿರುವ ಶ್ರೀ ಮಾರಿಕಾಂಬಾ ದೇವಿ ಜಾತ್ರೋತ್ಸವದ ಪ್ರಯುಕ್ತವಾಗಿ ಮಂಗಳವಾರ ಅಂಕೆ ಹಾಕುವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಜಾತ್ರೆ ನಡೆಯುವ ಒಂದು ವಾರ ಮೊದಲು ಮಾರಿಕಾಂಬ ದೇವಾಲಯದಲ್ಲಿ ದೇವರಿಗೆ ಬಿಟ್ಟ ಕುರಿ ಮತ್ತು ಕೋಣನನ್ನು ಪೂಜಿಸಿ ಊರಿನಲ್ಲಿ ಮೆರವಣಿಗೆ ಮಾಡಲಾಗುತ್ತದೆ ಆ ಸಂದರ್ಭದಲ್ಲಿ ಪ್ರತಿ ಮನೆಯಲ್ಲಿ ಕೋಣ ಮತ್ತು ಕುರಿ ಗೆ ಪೂಜಿಸಿ ಮಡಿಲು ಅಕ್ಕಿ ಕೊಡುತ್ತಾರೆ ಮೆರವಣಿಗೆ ಪುನಃ ದೇವಸ್ಥಾನ ಕ್ಕೆ ಬರುತ್ತದೆ ಅಲ್ಲಿಗೆ ಅಂಕೆ ಹಾಕುವ ಕಾರ್ಯಕ್ರಮ ಮುಕ್ತಾಯವಾಗುತ್ತದೆ ಎಂದು ಅಂಕೆ ಹಾಕುವ ಕಾರ್ಯಕ್ರಮದ ಬಗ್ಗೆ ಊರಿನ ಪ್ರಮುಖರಾದ ಆರ್ ಕೆ ನಾಯ್ಕ್ ರವರು ತಿಳಿಸಿದರು