
ಗಾಂಜಾ ಸೇವಿಸಿದ ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿ ಸೆರೆ
News Details
ಶಿರಸಿಯ ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಕೆಲಸ ಮಾಡುವ ಮಹೇಶ ಅಂಕೋಲೆಕರ್ ಗಾಂಜಾ ಸೇವಿಸಿ ಸಿಕ್ಕಿ ಬಿದ್ದಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿ ಅನುಚಿತವಾಗಿ ವರ್ತಿಸುದ್ದಿದ್ದ ಅವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಶಿರಸಿಯ ಗಾಂಧೀನಗರದ 4ನೇ ಕ್ರಾಸಿನಲ್ಲಿ ಮಹೇಶ ಅಂಕೋಲೆಕರ್ ವಾಸವಾಗಿದ್ದರು. ಅವರ ಓದಿಗೆ ತಕ್ಕ ಹಾಗೇ ಬ್ಯಾಂಕ್ ಉದ್ಯೋಗವೂ ಜೊತೆಗಿತ್ತು. ಕೆಲಸದ ಒತ್ತಡದ ಕಾರಣ ಅವರು ತಲೆಬಿಸಿಯಲ್ಲಿದ್ದರು. ಅದೇ ತಲೆಬಿಸಿಯಲ್ಲಿ ಕ್ರಮೇಣ ದುಶ್ಚಟದ ದಾರಿ ಹಿಡಿದರು. 36ನೇ ವಯಸ್ಸಿನಲ್ಲಿಯೇ ದುಶ್ಚಟಕ್ಕೆ ದಾಸರಾದ ಅವರು ಗಾಂಜಾ ಸೇದುವುದನ್ನು ರೂಢಿಸಿಕೊಂಡಿದ್ದರು. ಅದರಲ್ಲಿಯೂ ವಿಪರೀತ ಪ್ರಮಾಣದಲ್ಲಿ ಗಾಂಜಾ ಸೇದಿ ಸಾರ್ವಜನಿಕ ಸ್ಥಳದಲ್ಲಿ ಅಲೆದಾಡುತ್ತಿದ್ದರು.
ಮೇ 12ರಂದು ಶಿರಸಿಯ ಅಗಸೆಬಾಗಿಲಿನ ಕಲ್ಕುಣಿ ರಸ್ತೆಯ ಅಂಚಿನಲ್ಲಿ ಮಹೇಶ ಅಂಕೋಲೇಕರ್ ನಶೆಯಲ್ಲಿ ಹೊರಳಾಡುತ್ತಿದ್ದರು. ಅವರು ಅಮಲು ಪದಾರ್ಥ ಸೇವಿಸಿದ ಬಗ್ಗೆ ಸಾರ್ವಜನಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಶಿರಸಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ನಾಗಪ್ಪ ಬಿ ಅವರು ತಮ್ಮ ತಂಡದೊAದಿಗೆ ಆ ಸ್ಥಳಕ್ಕೆ ತೆರಳಿದರು. ಆಗಲೂ ಅಲ್ಲಿಯೇ ಇದ್ದ ಮಹೇಶ ಅಂಕೋಲೇಕರ್ ಅವರನ್ನು ಪೊಲೀಸರು ಮಾತನಾಡಿಸಿದರು.
ಮಾತನಾಡಲು ತೊದಲುತ್ತಿದ್ದ ಮಹೇಶರನ್ನು ಪೊಲೀಸರು ಶಿರಸಿಯ ಪಂಡೀತ್ ಆಸ್ಪತ್ರೆಗೆ ತಂದು ದಾಖಲಿಸಿದರು. ತಪಾಸಣೆ ನಡೆಸಿದ ವೈದ್ಯರು ಮಹೇಶ ಅಂಕೋಲೇಕರ್ ಗಾಂಜಾ ಸೇವಿಸಿರುವುದನ್ನು ದೃಢಪಡಿಸಿದರು. ಈ ಹಿನ್ನಲೆ ಪೊಲೀಸರು ಅಧಿಕರತ ದಾಖಲೆ ಆಧರಿಸಿ ಪ್ರಕರಣ ದಾಖಲಿಸಿದರು. ಆ ಮೂಲಕ ಬ್ಯಾಂಕ್ ಉದ್ಯೋಗಿಗೆ ಕಾನೂನು ಪಾಠ ಮಾಡಿದರು.