
ಮಹಿಳೆಯ ಮೋಸಕ್ಕೆ ಒಳಾಗಿ ಕಾರು ಕಳೆದುಕೊಂಡ ಕಾರವಾರದ ಚಾಲಕ
News Details
ಬೆಂಗಳೂರಿನಲ್ಲಿ ದುಡಿಯುತ್ತಿರುವ ಕಾರವಾರದ ಕಾರು ಚಾಲಕ ಅನಂತ ಎಂಬಾತರು ಮಹಿಳೆಯೊಬ್ಬರ ಮೋಹಕ್ಕೆ ಬಿದ್ದು ತಮ್ಮ ಕಾರು ಕಳೆದುಕೊಂಡಿದ್ದಾರೆ. ಬಾಡಿಗೆ ಕಾರಿನ ಮೂಲಕ ಕಾರವಾರಕ್ಕೆ ಬಂದ ನಾರಿ ಅನಂತರ ಸ್ನೇಹ ಬೆಳೆಸಿ ಕಾರು ಬಾಡಿಗೆ ಪಡೆದು ಪರಾರಿಯಾಗಿದ್ದು, ಬೆಂಗಳೂರು ಪೊಲೀಸರು ಇದೀಗ ಆ ನಾರಿಯ ಹುಡುಕಾಟ ಶುರು ಮಾಡಿದ್ದಾರೆ.
ಕಳೆದ ತಿಂಗಳು ಮಹಿಳೆಯೊಬ್ಬರು ಕಾರವಾರಕ್ಕೆ ಕಾರು ಬುಕ್ ಮಾಡಿದ್ದರು. ಊರಿಗೆ ಬರುವ ಖುಷಿಯಲ್ಲಿದ್ದ ಅನಂತ ಅವರು ಆ ಮಹಿಳೆಗಾಗಿ ಕಾರು ಓಡಿಸಿಕೊಂಡು ಬಂದಿದ್ದರು. ಆ ಕಾರು ಇಬ್ಬರ ನಡುವಿನ ಸ್ನೇಹ ಸಂಭಾಷಣೆಗೆ ಸಾಕ್ಷಿಯಾಗಿತ್ತು. ಆ ನಂತರ ಇಬ್ಬರು ತಮ್ಮ ಮೊಬೈಲ್ ಸಂಖ್ಯೆಯನ್ನು ಹಂಚಿಕೊoಡಿದ್ದರು. ವಾಟ್ಸಪ್ ಕಾಲ್ ಮೂಲಕ ಆ ಮಹಿಳೆ ಅನಂತ ಅವರನ್ನು ಆಗಾಗ ಮಾತನಾಡಿಸುತ್ತಿದ್ದರು.
ಇದಾದ ನಂತರ `ತಾನು ಬೆಂಗಳೂರಿನಿoದ ಮೈಸೂರು ಪ್ರವಾಸ ಮಾಡಲು ನಿರ್ಧರಿಸಿದ್ದೇನೆ. ಇದಕ್ಕಾಗಿ ಕಾರು ಬೇಕು' ಎಂದು ಆ ಮಹಿಳೆ ಅನಂತರಿಗೆ ಫೋನ್ ಮಾಡಿದ್ದರು. ಮೇ 6ರಂದು ರಾತ್ರಿ 9.30ಕ್ಕೆ ಕಾರು ಬೇಕು ಎಂದಿದ್ದ ಕಾರಣ ಅನಂತ ಅವರು ಸಮಯಕ್ಕೆ ಸರಿಯಾಗಿ ಕಾರು ನೀಡುವ ಉತ್ಸಾಹದಲ್ಲಿದ್ದರು. ಹೀಗಾಗಿ ಹಿಂದಿನ ದಿನ ಹುಬ್ಬಳ್ಳಿಯಲ್ಲಿದ್ದ ಅವರು ವೇಗವಾಗಿ ಕಾರು ಓಡಿಸಿಕೊಂಡು ಬಂದಿದ್ದರು. ಕಾರನ್ನು ಮಹಿಳೆಗೆ ನೀಡುವ ಮುನ್ನ ಬಾಡಿಗೆಯ ಬಗ್ಗೆಯೂ ಮಾತನಾಡಿದ್ದರು.
ಅದಾದ ನಂತರ ಮೆಜೆಸ್ಟಿಕ್ ಬಳಿ ರೂಂ ಬುಕ್ ಮಾಡುವಂತೆ ಆ ಮಹಿಳೆ ಅನಂತರ ಬಳಿ ಕೇಳಿಕೊಂಡಿದ್ದರು. ಆ ಮಹಿಳೆ ಹೇಳಿದಂತೆ ಅನಂತ್ ಅವರು ತುಮಕೂರು ರಸ್ತೆಯ ಬಳಿ ರೂಂ ಮಾಡಿದ್ದರು. ಅನಂತ ಅವರು 8ಕೀಮಿ ದೂರದಿಂದ ಆ ಮಹಿಳೆಯನ್ನು ರೂಮಿಗೆ ಕರೆದೊಯ್ದಿದ್ದರು. ಅನಂತಕುಮಾರ ಅವರನ್ನು ರೂಮಿಗೆ ಆಹ್ವಾನಿಸಿದ ಮಹಿಳೆ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದು, ಅನಂತ ಅವರು ಶೌಚಾಲಯಕ್ಕೆ ತೆರಳಿದಾಗ ಅವರ ಮೊಬೈಲ್ ಕದ್ದು ಕಾರಿನ ಜೊತೆ ಪರಾರಿಯಾದರು.
ಅನಂತ ಅವರು ಬಾತ್ ರೂಮಿನಿಂದ ಬೊಬ್ಬೆ ಹೊಡೆದಿರುವುದನ್ನು ಕೇಳಿ ಹೊಟೇಲ್ ಸಿಬ್ಬಂದಿ ಬಾಗಿಲು ತೆರೆದರು. ಅಷ್ಟರೊಳಗೆ ಆ ನಾರಿ ಇನ್ನೊಬ್ಬ ಪುರುಷನ ಜೊತೆ ಸೇರಿ ಕಾರು ಕದ್ದು ಬಹುದೂರ ಸಾಗಿದ್ದರು. ರೂಮು ಪಡೆಯುವ ಮುನ್ನ ಆ ಮಹಿಳೆ ತನ್ನ ಆಧಾರ್ ಕಾರ್ಡ ನೀಡಿದ್ದು, ಅದರ ಆಧಾರದಲ್ಲಿ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಹೊಟೇಲಿನ ಕ್ಯಾಮರಾಗಳು ಬಂದ್ ಆಗಿದ್ದರಿಂದ ಕಳ್ಳರ ಪತ್ತೆ ಸಾಧ್ಯವಾಗಿಲ್ಲ. ಸದ್ಯ ಚಿತ್ರದುರ್ಗದವರೆಗೆ ಕಾರು ಹೋದ ಸುಳಿವು ಸಿಕ್ಕಿದೆ. ಪೊಲೀಸರು ಅನಂತ ಹೇಳಿದ ಕಥೆಯ ಬಗ್ಗೆಯೂ ಅನುಮಾನವ್ಯಕ್ತಪಡಿಸಿದ್ದು, ಇನ್ನೊಂದು ದಿಕ್ಕಿನಲ್ಲಿ ಅನಂತ ಅವರ ವಿಚಾರಣೆಯೂ ಮುಂದುವರೆದಿದೆ.