Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-15

ಉತ್ತರ ಕನ್ನಡದಲ್ಲಿ ವಿದ್ಯುತ್ ಅವಘಡಗಳ ಪ್ರಮಾಣ ಹೆಚ್ಚುವಿಕೆ, ಜನ-ಜಾನುವಾರುಗಳಿಗೆ ಅಪಾಯ

News Details

ವಿದ್ಯುತ್ ಉತ್ಪಾದನೆ ಮೂಲಕ ದೇಶಕ್ಕೆ ಕೊಡುಗೆ ನೀಡುವ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿದ್ಯುತ್ ಅವಘಡಗಳ ಪ್ರಮಾಣವೂ ಹೆಚ್ಚಾಗಿದೆ. ವಿದ್ಯುತ್ ಬಳಕೆಗಾರರ ನಿರ್ಲಕ್ಷ್ಯದಿಂದ ಜನ-ಜಾನುವಾರುಗಳು ವಿದ್ಯುತ್ ಅವಘಡಗಳಿಗೆ ಬಲಿಯಾಗುತ್ತಿದ್ದಾರೆ.

ಸರ್ಕಾರಿ ಕಡತದಲ್ಲಿನ ಅಂಕಿ ಸಂಖ್ಯೆಗಳ ಪ್ರಕಾರ ಒಂದೇ ವರ್ಷದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಐವರು ವಿದ್ಯುತ್ ಅವಘಡದಿಂದ ಸಾವನಪ್ಪಿದ್ದಾರೆ. 32 ಜಾನುವಾರುಗಳು ವಿದ್ಯುತ್ ಸ್ಪರ್ಶದಿಂದ ಅಸುನೀಗಿವೆ. ಈ ಬಗ್ಗೆ ಅಧ್ಯಯನ ನಡೆಸಿದಾಗ `ಅನುಭವ ಇಲ್ಲದ ಜನ ವಿದ್ಯುತ್ ನಿರ್ವಹಣೆಯ ಸಾಹಸ' ನಡೆಸಿ ಆಪತ್ತಿಗೆ ಒಳಗಾಗುತ್ತಿರುವುದು ಹೆಚ್ಚಾಗಿದೆ. ಸುರಕ್ಷತೆಯಿಲ್ಲದೇ ನೀರಿನ ಪಂಪು ಅಳವಡಿಕೆ, ಮೋಟಾರ್ ನಿರ್ವಹಣೆಯಲ್ಲಿನ ಲೋಪದಂಥಹ ಗಂಭೀರ ಕಾರಣಗಳೊಂದಿಗೆ ವಿದ್ಯುತ್ ತಂತಿ ಮಾರ್ಗ ಬಳಸಿ ಬಟ್ಟೆ ಒಣಗಿಸುವ ಧೈರ್ಯ ಮಾಡುವುದು ಸಹ ಸಾವು-ನೋವುಗಳಿಗೆ ಮುಖ್ಯ ಕಾರಣವಾಗಿದೆ.

ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಳವಾಗಿರುವ ಅವಧಿಯಲ್ಲಿ ನಡೆಯುವ ಅಗ್ನಿ ದುರಂತಗಳು ದೊಡ್ಡ ಪ್ರಮಾಣದ ಹಾನಿ ಉಂಟು ಮಾಡುತ್ತಿವೆ. ಬಹುತೇಕ ಅಗ್ನಿ ಅವಘಡಗಳು ವಿದ್ಯುತ್ ವಲಯದಿಂದಲೇ ಆಗುತ್ತಿವೆ. ಇದರೊಂದಿಗೆ ಅನಧಿಕೃತವಾಗಿ ವಿದ್ಯುತ್ ಕಂಬ ಹತ್ತುವುದು, ಮುಖ್ಯ ಪ್ಯೂಸ್ ಅಳವಡಿಸುವುದು, ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯುವುದು, ವಿದ್ಯುತ್ ಕಂಬದ ಸಮೀಪದ ಮರದ ರೆಂಬೆ-ಕೊoಬೆ ಗಮನಿಸಿಯೂ ಮೌನವಾಗಿರುವುದು ಬೋರ್‌ವೆಲ್'ಗೆ ಅಳವಡಿಸಿರುವ ಮೋಟಾರ್ ಗೌಂಡಿAಗ್ ಆಗುವುದು, ಹಸಿ ಮರದ ಕಟ್ಟಿಗೆಗಳಿಂದ ವಿದ್ಯುತ್ ತಂತಿಗಳನ್ನು ತಾಕುವುದು, ಹೊಸ ಮನೆಗಳ ನಿರ್ಮಾಣ ಸಂದರ್ಭದಲ್ಲಿ ಗೋಡೆ ಕೊರೆಯುವ ಯಂತ್ರಗಳಿoದ ಆಗುವ ಅಪಾಯವೂ ಸಾವು-ನೋವುಗಳಿಗೆ ಕಾರಣವಾಗಿದೆ.

ಈ ಬಗ್ಗೆ ಹೆಸ್ಕಾಂ ಆಗಾಗ ಜಾಗೃತಿ ಮೂಡಿಸಿದರೂ ಜನ ತಪ್ಪು ಕೆಲಸ ಮಾಡುವುದನ್ನು ಬಿಟ್ಟಿಲ್ಲ. ಹೀಗಾಗಿ 2024-25ನೇ ಸಾಲಿನಲ್ಲಿಯೂ ಈವರೆಗೆ 65 ವಿದ್ಯುತ್ ಅವಘಡಗಳು ನಡೆದಿದೆ. ಆ ಪೈಕಿ 5 ಜನ ಸಾವನಪ್ಪಿದ್ದಾರೆ. 13 ಜನ ಗಾಯಗೊಂಡಿದ್ದಾರೆ. 15 ಆಸ್ತಿಗಳಿಗೆ ಹಾನಿಯಾಗಿದ್ದು, ಬೆಳೆಗಳೆಲ್ಲವೂ ಸುಟ್ಟು ಕರಕಲಾಗಿದೆ. ಇನ್ನೂ ಅನೇಕ ಪ್ರಕರಣಗಳ ಬಗ್ಗೆ ಜನ ಹೆಸ್ಕಾಂ ಕಚೇರಿಗೆ ಮಾಹಿತಿ ನೀಡಿಲ್ಲ. ಹೀಗಾಗಿ ಆ ಅಂಕಿ-ಅoಶಗಳು ಇಲ್ಲಿ ಸೇರಿಲ್ಲ.

ಇನ್ನೂ ಹಲವು ಬಾರಿ ಹೆಸ್ಕಾಂ ನಿರ್ಲಕ್ಷö್ಯದಿಂದಲೂ ವಿದ್ಯುತ್ ಅವಘಡ ನಡೆಯುತ್ತದೆ. ವಿದ್ಯುತ್ ತಂತಿ ಹರಿದು ಬೀಳುವುದು, ವಿದ್ಯುತ್ ಸೋರಿಕೆ, ವಿದ್ಯುತ್ ಸರಬರಾಜು ತಂತಿಯಲ್ಲಿನ ದೋಷ, ಶಾರ್ಟ ಸರ್ಕೀಟಿನಿಂದಾಗುವ ಅಗ್ನಿ ಅವಘಡಗಳ ಬಗ್ಗೆ ಆಗಾಗ ವರದಿಯಾಗುತ್ತಲೇ ಇದೆ. ವಿದ್ಯುತ್ ಅವಘಡದಿಂದ ಸಾವು-ನೋವು ಸಂಭವಿಸಿದಾಗ ಹೆಸ್ಕಾಂ ಪರಿಹಾರ ನೀಡುತ್ತದೆ. ಆದರೆ, ಆದ ನಷ್ಟಕ್ಕೆ ಸರ್ಕಾರ ನೀಡುವ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಹಾಕಿದ ಹಾಗೇ. ಹೀಗಾಗಿ ವಿದ್ಯುತ್ ಅವಘಡ ತಪ್ಪಿಸಲು ಸದಾ ಜಾಗೃತವಾಗಿರುವುದು ಮಾತ್ರ ಪರಿಹಾರ.