
0:00:00
2025-05-15
ಅನುಪಮಾ ಹೆಗಡೆಗೆ ಚಿತ್ರಕಥೆ ಪ್ರಶಸ್ತಿ
News Details
ಶಿರಸಿ ಮೂಲದ ನ್ಯಾಯವಾದಿ, ಲೇಖಕಿ ಅನುಪಮಾ ಹೆಗಡೆ ಅವರ ಪ್ರತಿಭೆಯನ್ನು ಚಲನಚಿತ್ರ ಕ್ರಿಟಿಕ್ ಅಕಾಡೆಮಿ ಗುರುತಿಸಿದೆ. ಉತ್ತಮ ಚಿತ್ರಕಥೆಗಾಗಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
`ಹದಿನೇಳೆಂಟು' ಎಂಬ ಸಿನೇಮಾಗಾಗಿ ಅನುಪಮಾ ಹೆಗಡೆ ಚಿತ್ರಕಥೆ ರಚಿಸಿದ್ದರು. ಹೀಗಾಗಿ ಈ ಸಿನಿಮಾದ ನಿರ್ದೇಶಕ, ಕಥೆಗಾರ ಪ್ರಥ್ವಿ ಕೋಣನೂರು ಜೊತೆ ಅನುಪಮಾ ಹೆಗಡೆ ಅವರನ್ನು ಗೌರವಿಸಲಾಯಿತು, ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದ ಸಮಾರಂಭದಲ್ಲಿ ಅನುಪಮಾ ಹೆಗಡೆ ಸನ್ಮಾನ ಸ್ವೀಕರಿಸಿದರು.
`ಹದಿನೇಳೆಂಟು' ಎಂಬ ಸಿನಿಮಾ ಒಟ್ಟು ನಾಲ್ಕು ಪ್ರಶಸ್ತಿಪಡೆದಿದೆ. ಬೆಂಗಳೂರಿನ ಪತ್ರಕರ್ತರು ಆಯ್ಕೆ ಮಾಡಿ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದು, ಚಂದನವನ ಅಕಾಡೆಮಿ ಸಾಧಕರನ್ನು ಗುರುತಿಸಿದೆ. ಅನುಪಮಾ ಹೆಗಡೆ ಅವರು ಹೈಕೋರ್ಟಿನ ನ್ಯಾಯವಾದಿಯಾಗಿದ್ದಾರೆ. ಅವರು ಶಿರಸಿಯ ನೀರ್ನಳ್ಳಿಯ ರಘುಪತಿ ಭಟ್ಟ ಹಾಗೂ ಮಹಾದೇವಿ ಭಟ್ಟ ದಂಪತಿಯ ಪುತ್ರಿ. ಹುಲೇಮಳಗಿ ಮೂಲದ ದಿನೇಶ ಹೆಗಡೆ ಅವರ ಪತ್ನಿ.