Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-16

ಅಂಬಿಕಾ ನಗರದಲ್ಲಿ ಹೆಬ್ಬಾವು ದರ್ಶನ!

News Details

ದಾಂಡೇಲಿಯ ಅಂಬಿಕಾ ನಗರದಲ್ಲಿ ಬುಧವಾರ ದೊಡ್ಡದೊಂದು ಹೆಬ್ಬಾವು ಕಾಣಿಸಿಕೊಂಡಿದೆ. ಉರಗ ತಜ್ಞರು ಆಗಮಿಸಿ ಆ ಹಾವನ್ನು ಹಿಡಿದಿದ್ದು, ಕಾಡಿಗೆ ಬಿಟ್ಟಿದ್ದಾರೆ.

ಅಂಬಿಕಾ ನಗರದ ಕೆಪಿಸಿ ಕಾಲೋನಿ ಕಡೆ ಹೆಬ್ಬಾವು ಆಗಮಿಸಿದ್ದು, ಜನ ಆತಂಕವ್ಯಕ್ತಪಡಿಸಿದರು. ಇಲ್ಲಿನ ಸಂಗೀತಾ ಮಿರಾಶಿ ಅವರ ಮನೆ ಅಂಚಿನಲ್ಲಿ 13 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿತು. ಆ ಮನೆಯವರು ಅರಣ್ಯ ಇಲಾಖೆಗೆ ಹೆಬ್ಬಾವಿನ ಆಗಮನದ ಬಗ್ಗೆ ಮಾಹಿತಿ ನೀಡಿದರು.

ಅರಣ್ಯ ಇಲಾಖೆಯವರು ಉರಗತಜ್ಞ ಅಸ್ಲಾಂ ಹಾಗೂ ವಿನೋದ ಅವರ ನೆರವಿನಿಂದ ಆ ಹಾವು ಹಿಡಿದರು. ಅರಣ್ಯ ಇಲಾಖೆಯವರ ಸಮಕ್ಷೇಮದಲ್ಲಿ ಆ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು. ಇದರಿಂದ ಮನೆಯವರ ಆತಂಕವೂ ದೂರವಾಯಿತು.

ಈಚೆಗೆ ಆಹಾರ ಅರೆಸಿ ನಾಡಿಗೆ ಬರುವ ಹೆಬ್ಬಾವಿನ ಸಂಖ್ಯೆ ಹೆಚ್ಚಾಗಿದೆ. ಕೋಳಿ ಸಾಕುವ ಕೇಂದ್ರಗಳ ಕಡೆ ಹಾವು ಆಕರ್ಷಿತವಾಗುತ್ತಿವೆ.