
ಆಯಿಮನೆಯಲ್ಲಿ ಅರಳಿದ ಸಂಗೀತ ಸಂಜೆ
News Details
ಸಿದ್ದಾಪುರ. ತಾಲೂಕಿನ ಡೊಂಬೆಕೈ ಅಲ್ಲಿ ಕವಿತಾ ಮತ್ತು ಅಶೋಕ ರಾವ್ ಅವರು ಕಟ್ಟಿಸಿರುವ ನೂತನ ಗೃಹ ಆಯಿ ಮನೆ ಪ್ರವೇಶದ ನಿಮಿತ್ತ ಬುಧವಾರ ಖ್ಯಾತ ಕಲಾವಿದರ ಸಂಗೀತ ಸಂಜೆ ಏರ್ಪಡಿಸಲಾಗಿತ್ತು. ಪ್ರಾರಂಭದಲ್ಲಿ ರಾಜೇಶ್ವರಿ ವಿನಾಯಕ ಭಟ್ಟ ಡೊಂಬೆಕೈ ಗಣಪತಿ ಹಾಗೂ ಶಾರದಾ ಭಜನೆಗಳನ್ನು ಹಾಡಿದರು. ಸಂಜಯ ಭಟ್ಟ ಬಿಳಗಿ ತಬಲಾದಲ್ಲಿ ,ಜೈರಾಮ ಭಟ್ಟ ಹೆಗ್ಗಾರಳ್ಳಿ ಹಾರ್ಮೋನಿಯಂ ನಲ್ಲಿ ಸಹಕರಿಸಿದರು. ಆಕಾಶವಾಣಿ ಕಲಾವಿದೆ ಅಮೃತಾ ರಾವ್ ಉಡುಪ ಬೆಂಗಳೂರು ವಿಲಂಬಿತ್ ರೂಪಕ ತಾಲ್ ಮತ್ತು ದೃತ್ ತೀನ ತಾಲ್ ದಲ್ಲಿ ರಾಗ ಜೋಗ್ ಅನ್ನು ಮತ್ತು ಮರಾಠಿ ಗೀತೆಯೊಂದನ್ನು ಸುಮಧುರವಾಗಿ ಪ್ರಸ್ತುತ ಪಡಿಸಿದರು.ಇವರಿಗೆ ಗುರುರಾಜ ಆಡುಕಳ ತಬಲಾ ಹಾಗೂ ಸತೀಶ ಭಟ್ಟ ಹೆಗ್ಗಾರ್ ಹಾರ್ಮೋನಿಯಂ ಸಾತ್ ನೀಡಿದರು. ನಂತರ ಪ್ರಕಾಶ ಹೆಗಡೆ ಕಲ್ಲಾರೆಮನೆಯವರ ಕೊಳಲು ಹಾಗೂ ಸತೀಶ ಭಟ್ಟ ಹೆಗ್ಗಾರ ಅವರ ಹಾರ್ಮೋನಿಯಂ ಜುಗಲ್ ಬಂದಿ, ಗುರುರಾಜ ಆಡುಕಳ ಅವರ ಆಕರ್ಷಣೀಯ ತಬಲಾ ಸಾತ್ ನೊಂದಿಗೆ ಪ್ರೇಕ್ಷಕರಿಗೆ ವಿಶೇಷ ರಂಜನೆ ನೀಡಿತು. ಮನೆಯ ಯಜಮಾನರಾದ ಅಶೋಕ ರಾವ್ ಸ್ವಾಗತಿಸಿದರು. ಅವಿನಾಶ್ ರಾವ್ ವಂದಿಸಿದರು.