Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-16

ಕುಮಟಾದಲ್ಲಿ ಡ್ರಂಕ್ ರೈಡಿಂಗ್ ದಾಳ್: 13 ಬೈಕು ಜಪ್ತಿ

News Details

ಮದ್ಯಪಾನ ಮಾಡಿ ಬೈಕ್ ಓಡಿಸುತ್ತಿದ್ದವರ ಬೈಕುಗಳನ್ನು ಕುಮಟಾ ಪೊಲೀಸರು ವಶಕ್ಕೆಪಡೆದಿದ್ದಾರೆ. ಈ ದಿನ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 13 ಬೈಕುಗಳು ಸಿಕ್ಕಿವೆ.

ಕುಮಟಾ ಹಾಗೂ ಸುತ್ತಲಿನ ಪ್ರದೇಶದಲ್ಲಿ ಪುಂಡ-ಪೋಕರಿಗಳ ಹಾವಳಿ ಹೆಚ್ಚಾದ ಬಗ್ಗೆ ಸಾರ್ವಜನಿಕರು ದೂರಿದ್ದರು. ಮಿತಿಮೀರಿದ ವೇಗದ ಚಾಲನೆ, ಮದ್ಯ ಸೇವಿಸಿ ವಾಹನ ಚಾಲನೆ, ಕಾಲೇಜುಗಳ ಬಳಿ ಕರ್ಕಶ ಶಬ್ದ ಸೇರಿ ಅನೇಕ ಸಮಸ್ಯೆಗಳ ಬಗ್ಗೆ ಜನ ಗಮನಕ್ಕೆ ತಂದಿದ್ದರು. ಪೊಲೀಸರ ಕಾರ್ಯವೈಖರಿ ವಿರುದ್ಧವೂ ಕೆಲವರು ಟೀಕಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಮ್ಮ ಇತರೆ ಕೆಲಸಗಳ ಒತ್ತಡದ ನಡುವೆಯೂ ವಿಶೇಷ ಕಾರ್ಯಾಚರಣೆ ನಡೆಸಿ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿದರು.

ಗುರುವಾರ ಬೆಳಗ್ಗೆಯಿಂದ ಪೊಲೀಸರು ಕುಮಟಾದ ವಿವಿಧ ಕಡೆ ಡ್ರಿಂಕ್ & ಡ್ರೈವ್ ಕಾರ್ಯಾಚರಣೆ ನಡೆಸಿದರು. ಪೊಲೀಸ್ ಅಧಿಕಾರಿ ಯೋಗೀಶ ಎಂ ಕೆ ಮುಂದಾಳತ್ವದಲ್ಲಿ ಪೊಲೀಸ್ ಸಿಬ್ಬಂದಿ ವಿವಿಧ ಬೈಕುಗಳಿಗೆ ಅಡ್ಡಲಾಗಿ ಕೈ ಮಾಡಿದರು. ಕರ್ಕಶ ಸದ್ದು ಮಾಡುವ ಬೈಕುಗಳ ಮಾಲಕರಿಗೂ ಬುದ್ದಿ ಕಲಿಸಿದರು. 13 ಬೈಕ್ ಸವಾರರ ಮೇಲೆ ಡ್ರಿಂಕ್ & ಡ್ರೈವ್ ಪ್ರಕರಣ ದಾಖಲಿಸಿ ಆ ಬೈಕುಗಳನ್ನು ವಶಕ್ಕೆಪಡೆದರು. ಪೊಲೀಸರ ಈ ನಡೆಯನ್ನು ಸಾರ್ವಜನಿಕರು ಶ್ಲಾಘಿಸಿದರು.

ಈ ಹಿಂದೆ ಹೆದ್ದಾರಿ ಗಸ್ತು ವಾಹನದ ಮೂಲಕ ಬೈಕ್ ತಪಾಸಣೆ ನಡೆಯುತ್ತಿತ್ತು. ಆದರೆ, ಹೆದ್ದಾರಿ ಗಸ್ತು ವಾಹನದ ಕಾರ್ಯವೈಖರಿ ಬಗ್ಗೆ ಕ್ಷೇತ್ರದ ಶಾಸಕರು ಬಹಿರಂಗವಾಗಿ ಅಸಮಧಾನವ್ಯಕ್ತಪಡಿಸಿದ್ದರು. ಅದಾದ ನಂತರ ಪೊಲೀಸರು ಮೃದು ದೋರಣೆ ಅನುಸರಿಸಿದ್ದು, ಇದೀಗ ಸಾರ್ವಜನಿಕ ಸಮಸ್ಯೆ ಹೆಚ್ಚಾದ ಹಿನ್ನಲೆ ಕಠಿಣ ಕ್ರಮ ಜರುಗಿಸಿದ್ದಾರೆ. ಬೇರೆಯವರ ಜೀವಕ್ಕೆ ಮಾರಕವಾಗುವ ರೀತಿ ಬೈಕ್ ಚಾಲನೆ ಮಾಡುವವರ ವಿರುದ್ಧ ಕ್ರಮಕ್ಕಾಗಿ ನಿರಂತರ ತಪಾಸಣೆ ನಡೆಯಬೇಕು ಎಂದು ಅಲ್ಲಿನವರು ಆಗ್ರಹಿಸಿದ್ದಾರೆ.