Loading...
  • aksharakrantinagarajnaik@gmail.com
  • +91 8073197439
Total Visitors: 2788
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-17

ಹೋಳಿ ಹಬ್ಬದ ದಿನ ಹಲ್ಲೆ: ಆರೋಪಿಗಳಿಗೆ ನ್ಯಾಯಾಲಯದ ಶಿಕ್ಷೆ

News Details

ಹೋಳಿ ಹಬ್ಬದ ವೇಳೆ ನಡೆಯುವ ಬೇಡರ ವೇಷ ನೋಡಲು ಶಿರಸಿಗೆ ಬಂದಿದ್ದ ವಿವೇಕ ಹೆಗಡೆ ಹಾಗೂ ವಾಸುದೇವ ಹುಲೆಕಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರೀತಂ ಡಿಸೋಜಾ ಹಾಗೂ ಲಾರೇಲ್ ನೋರೋನಾ ಎಂಬಾತರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

2015ರ ಮಾರ್ಚ 5ರಂದು ಸಿಪಿ ಬಜಾರ್ ರಸ್ತೆಯ ಮಸೀದಿ ಬಳಿ ವಿವೇಕ ಹೆಗಡೆ ಹಾಗೂ ವಾಸುದೇವ ಹುಲೆಕಲ್ ಬೇಡರ ವೇಷ ನೋಡುತ್ತಿದ್ದರು. ಆಗ, ಶಿರಸಿ ದುಂಡುಸಿ ನಗರದ ಪ್ರೀತಂ ಡಿಸೋಜಾ ಹಾಗೂ ಮುಸ್ಲಿಂ ಗಲ್ಲಿಯ ಲಾರೇಲ್ ನೋರೋನಾ ಅಲ್ಲಿಗೆ ಬಂದು ರಂಪಾಟ ನಡೆಸಿದ್ದರು. ವಿವೇಕ ಹೆಗಡೆ ಹಾಗೂ ವಾಸುದೇವ ಹುಲೆಕಲ್ ಮೇಲೆ ಪ್ರೀತಂ ಹಾಗೂ ಲಾರೇಲ್ ದಾಳಿ ಮಾಡಿದ್ದರು. ಕಲ್ಲಿನಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದರು.

ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯವೂ 12 ಸಾಕ್ಷಿಗಳ ವಿಚಾರಣೆ ನಡೆಸಿತು. ಕೊನೆಗೆ ನ್ಯಾಯಾಧೀಶೆ ಶಾರದಾದೇವಿ ಹಟ್ಟಿ ಅವರು ಆರೋಪಿತರಿಗೆ 4.6ತಿಂಗಳ ಜೈಲು ಶಿಕ್ಷೆ ಪ್ರಕಟಿಸಿದರು. ಜೊತೆಗೆ 13 ಸಾವಿರ ರೂ ದಂಡ ಹಾಗೂ ಗಾಯಾಳು ವಿವೇಕ್ ಹೆಗಡೆ ಅವರಿಗೆ 20 ಸಾವಿರ ರೂ ಪರಿಹಾರ ನೀಡುವಂತೆ ಆದೇಶಿಸಿದರು. ಪಿಎಸ್‌ಐ ನಾಗಪ್ಪ ಬಿ ಅವರ ಜೊತೆ ಪೊಲೀಸ್ ಸಿಬ್ಬಂದಿ ತುಕರಾಮ ಬಣಕಾರ ಹಾಗು ವಿಶ್ವನಾಥ ಬಂಡಾರಿ ಪ್ರಕರಣದಲ್ಲಿ ಸಾಕಷ್ಟು ಮುತುವರ್ಜಿವಹಿಸಿದ್ದರು. ಸಹಾಯಕ ಅಭಿಯೋಜಕರಾದ ಚೇತನಾ ಜಿ ಎಸ್ ಪ್ರಕರಣದಲ್ಲಿ ವಾದ ಮಂಡಿಸಿದ್ದರು.