Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
16:57:00 2025-04-03

ಕಾರವಾರದಿಂದ ಮಂಗಳೂರಿನವರೆಗೆ ಸಮುದ್ರದಲ್ಲಿ ಒಬ್ಬಂಟಿಯಾಗಿ ಕಯಾಕ್ ನಡೆಸಲು ಕಾರ್ತಿಕ್ ಎಂಬಾತರು ಸಿದ್ಧತೆ ನಡೆಸಿದ್ದಾರೆ.

News Details

ಕಾರವಾರದಿಂದ ಮಂಗಳೂರಿನವರೆಗೆ ಸಮುದ್ರದಲ್ಲಿ ಒಬ್ಬಂಟಿಯಾಗಿ ಕಯಾಕ್ ನಡೆಸಲು ಕಾರ್ತಿಕ್ ಎಂಬಾತರು ಸಿದ್ಧತೆ ನಡೆಸಿದ್ದಾರೆ. 20 ದಿನಗಳ ಸಮುದ್ರಯಾನ ನಡೆಸಿ ಅವರು ತಮ್ಮ ಕಯಾಕ್ ಯಾತ್ರೆ ಮುಗಿಸಲಿದ್ದಾರೆ.

ಪರಿಸರ, ಪ್ರಕೃತಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಕಾರ್ತಿಕ್ ಅವರ ಉದ್ದೇಶ. ಈ ಸಮುದ್ರಯಾನಕ್ಕೆ ಮೀನುಗಾÀರಿಕಾ ಇಲಾಖೆ ಹಾಗೂ ಕೇಂದ್ರೀಯ ಸಾಗರ ಜೀವವೈವಿಧ್ಯ ಮತ್ತು ಮೀನುಗಾರಿಕಾ ಸಂಶೋಧನಾ ಇಲಾಖೆ ಸಹಕಾರ ನೀಡಿದೆ.

ಕಾರ್ತಿಕ್ ಜಿ ಕೆದಿಯಾಲ್ ಅವರು ಮೈಸೂರಿನ ಸ್ಪೀಶಿಸ್ ಸಂಸ್ಥೆಯ ಸ್ಥಾಪಕರು. ಈ ಸಂಸ್ಥೆ ವನ್ಯಜೀವಿ ಸಂರಕ್ಷಣೆ, ವನ್ಯಜೀವಿಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ಕಾರ್ಯ ನಡೆಸುತ್ತಿದೆ. ಜೊತೆಗೆ ಪರಿಸರ, ಪ್ರಕೃತಿ ಹಾಗೂ ವನ್ಯಜೀವಿಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ.

ಈ ನಿಟ್ಟಿನಲ್ಲಿ ಸಾಗರ ಜೀವವೈವಿಧ್ಯ ಸಂರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಕಾರ್ತಿಕ್ ಕಯಾಕ್ ಯಾನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಏಪ್ರಿಲ್ 4ರಂದು ಕಾರವಾರದ ಅಮದಳ್ಳಿ ಮೂಲಕ ಈ ಯಾತ್ರೆ ಶುರುವಾಗಲಿದೆ. ಬೆಳಗ್ಗೆ 7.30ಕ್ಕೆ ಕಯಾಕ್ ಏರುವ ಅವರು ಮೂರು ವಾರ ಪ್ರಯಾಣ ನಡೆಸಿ ಮಂಗಳೂರು ಮುಟ್ಟಲಿದ್ದಾರೆ.