ಕುಮಟಾದ ಹಳೆ ಬಸ್ ನಿಲ್ದಾಣ ಹಾಗೂ ಮಿರ್ಜಾನ್ ಕೋಟೆಕ್ರಾಸಿನ ಬಳಿ ಮಟ್ಕಾ ಚೀಟಿ ಬರೆಯುತ್ತಿದ್ದವರ ವಿರುದ್ಧ ಪೊಲೀಸ್ ನಿರೀಕ್ಷಕ ಯೋಗೇಶ ಕೆ ಎಂ ಕಾನೂನು ಕ್ರಮ ಜರುಗಿಸಿದ್ದಾರೆ.
News Details
ಕುಮಟಾದ ಹಳೆ ಬಸ್ ನಿಲ್ದಾಣ ಹಾಗೂ ಮಿರ್ಜಾನ್ ಕೋಟೆಕ್ರಾಸಿನ ಬಳಿ ಮಟ್ಕಾ ಚೀಟಿ ಬರೆಯುತ್ತಿದ್ದವರ ವಿರುದ್ಧ ಪೊಲೀಸ್ ನಿರೀಕ್ಷಕ ಯೋಗೇಶ ಕೆ ಎಂ ಕಾನೂನು ಕ್ರಮ ಜರುಗಿಸಿದ್ದಾರೆ.
ಹಳೆ ಬಸ್ ನಿಲ್ದಾಣದ ಬಳಿ ಮಾಸೂರಿನ ಲಕ್ಷಿö್ಮÃಕಾಂತ ಗುನಗಾ ಪೆಟ್ಟಿಗೆ ಅಂಗಡಿ ನಡೆಸುತ್ತಿದ್ದರು. ಕಮಿಷನ್ ಆಸೆಗಾಗಿ ಅವರು ಮಟ್ಕಾ ಆಡಿಸುವುದನ್ನು ರೂಢಿಸಿಕೊಂಡಿದ್ದರು. ಪೊಲೀಸ್ ನಿರೀಕ್ಷಕ ಯೋಗೇಶ ಕೆ ಎಂ ಅದಕ್ಕೆ ತಡೆ ಒಡ್ಡಿದರು. 1ರೂಪಾಯಿಗೆ 80ರೂ ಕೊಡುವುದಾಗಿ ಲಕ್ಷಿö್ಮÃಕಾಂತ ಗುನಗಾ ಜನರಿಂದ ಸಂಗ್ರಹಿಸಿದ್ದ 2230ರೂ ಹಣವನ್ನು ಪೊಲೀಸರು ವಶಕ್ಕೆ ಪಡೆದರು. ಜೊತೆಗೆ ಪ್ರಕರಣವನ್ನು ದಾಖಲಿಸಿದರು.
ಕೂಲಿ ಕೆಲಸ ಮಾಡುವ ಮಿರ್ಜಾನಿನ ದಿನೇಶ ಪೈ ಕೋಟೆಕ್ರಾಸಿನ ಬಳಿ ಮಟ್ಕಾ ಆಡಿಸುತ್ತಿದ್ದರು. ಅಲ್ಲಿ ಓಡಾಡುವ ಜನರಿಗೆ ಕರೆದು ಹಣ ಹೂಡಿಕೆ ಮಾಡುವಂತೆ ಒತ್ತಾಯಿಸುತ್ತಿದ್ದರು. ಅವರ ಬಳಿಯಿದ್ದ 520ರೂ ಹಣ, ಮಟ್ಕಾ ಪರಿಕ್ಕರಗಳನ್ನು ಪೊಲೀಸರು ವಶಕ್ಕೆ ಪಡೆದರು. ಕಾನೂನುಬಾಹಿರವಾದ ಮಟ್ಕಾ ಆಡಿಸುತ್ತಿದ್ದವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿ ಕೋರ್ಟು-ಕಚೇರಿ ಅಲೆದಾಡುವಂತೆ ಮಾಡಿದರು.