
ಅನಧಿಕೃತವಾಗಿ ನಡೆಸುತ್ತಿರುವ ಕ್ಲಿನಿಕ್ ಗಳ ಮೇಲೆ ಮುಂಡಗೋಡ ಕೆಪಿಎಂಇ ಪ್ರಾಧಿಕಾರದಿಂದ ದಾಳಿ
News Details
ಅನಿಧಿಕೃತವಾಗಿ ನಡೆಸುತ್ತಿದ್ದ 7 ಕ್ಲಿನಿಕ್ ಗೆ ಚಾವಿ ಮತ್ತು ನೊಟಿಸ್
ಮುಂಡಗೋಡ: ತಾಲೂಕಿನಲ್ಲಿ ಅನಧಿಕ್ರತವಾಗಿ ನಡೆಯುತ್ತಿದ್ದ ಕ್ಲಿನಿಕ್ ಗಳ ಮೇಲೆ ಅಧಿಕಾರಿಗಳ ದಾಳಿ ಬೀಗ ಜಡಿದು ನೋಟಿಸ್ ನೀಡಲಾಗಿದೆ.
ಶ್ರೀ ಚನ್ನಬಸವೇಶ್ವರ ಮೆಡಿಕಲ್ & ಜನರಲ್ ಸ್ಟೋರ್ಸ್ ಮಳಗಿ, ಶ್ರೀ ರೇಣುಕಾ ಮೆಡಿಕಲ್ & ಮೆಡಿಕಲ್ ಸ್ಟೋರ್ಸ್ ಮಳಗಿ, ಕೋಡಂಬಿಯಲ್ಲಿ ಅಹ್ಮದಸಾಬ್ ಎಂಬುವರು ತಮ್ಮ ಮನೆಯ ಪಕ್ಕದಲ್ಲಿ ನಡೆಸುತ್ತಿದ್ದ ಕ್ಲಿನಿಕ್, ಶ್ರೀ ಗುರು ಕ್ಲಿನಿಕ್, ಡಾ.ಅಮರ್ ಶಿಂದೆ ಇವರು ಕೊಡಂಬಿ ಮತ್ತು ಪಾಳಾ ಹಾಗು ತಮ್ಮ ಮನೆಯಲ್ಲಿ ನಡೆಸುತ್ತಿದ್ದ ಕ್ಲಿನಿಕ್, ಆರ್ ಜಿ ಪೂಜಾರ್ ನಡೆಸುತ್ತಿದ್ದ ಧನ್ವಂತರಿ ಕ್ಲಿನಿಕ್ ಕಾತೂರ್, ಗೋಪಾಲ ಬೆನ್ನೂರ್ ಗಣೇಶಪುರದ ಬಾಡಿಗೆ ಮನೆಯಲ್ಲಿ ನಡೆಸುತ್ತಿದ್ದ ಕ್ಲಿನಿಕ್ ಹಾಗು ಬಸವರಾಜ ಹಡಪದ್ ಕಾವಲಕೊಪ್ಪದಲ್ಲಿ ನಡೆಸುತ್ತಿದ್ದ ಧನ್ವಂತರಿ ಕ್ಲಿನಿಕ್ ಬಂದ್ ಮಾಡಿ ನೋಟಿಸ್ ನೀಡಲಾಗಿದೆ.
ಈ ಕಾರ್ಯಚರಣೆಯಲ್ಲಿ ಆಯ್ ಎಂ ಎ ಮುಂಡಗೋಡ ಅದ್ಯಕ್ಷರಾದ ಡಾ.ರವಿ ಹೆಗಡೆ, ತಾಲೂಕಾ ವೈದ್ಯಾದಿಕಾರಿ ಡಾ.ನರೇಂದ್ರ ಪವಾರ್, ವೈದ್ಯಾದಿಕಾರಿ ಡಾ.ಸಂಜೀವ ಗಲಿಗಲಿ, ಆಡಳಿತ ವೈದ್ಯಾದಿಕಾರಿ ಡಾ.ಭರತ್ ಡಿ.ಟಿ ಹಾಗು ಪೋಲಿಸರು ಪಾಲ್ಗೊಂಡಿದ್ದರು.