Loading...
  • aksharakrantinagarajnaik@gmail.com
  • +91 8073197439
Total Visitors: 2788
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
11:39:53 2025-03-14

ಚುರುಕು ವ್ಯಕ್ತಿತ್ವದ ಶಿರಸ್ತೇದಾರನಿಗೆ ರಾಜ್ಯ ಸಂಘಟನಾ ಜವಾಬ್ದಾರಿ!

News Details

ಉಪತಹಶೀಲ್ದಾರರು ಹಾಗೂ ಶಿರಸ್ತೆದಾರರ ರಾಜ್ಯ ಸಂಘಕ್ಕೆ ಕುಮಟಾ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ್ ಜಗದೀಶ ಪೂಜಾರಿ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಜಗದೀಶ ಪೂಜಾರಿ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಲಾಯಿತು. ಈ ಹಿನ್ನಲೆ ನೌಕರರ ಸಮಸ್ಯೆಯನ್ನು ಸರ್ಕಾರಕ್ಕೆ ಮುಟ್ಟಿಸುವಲ್ಲಿ ಜಗದೀಶ ಪೂಜಾರಿ ಅವರ ಹೊಣೆಗಾರಿಕೆ ಹೆಚ್ಚಾಗಿದೆ. ಜಗದೀಶ ಪೂಜಾರಿ ಅವರು ಈ ಮೊದಲು ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದರು. ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರಾಗಿ ಅವರು ಅನುಭವ ಹೊಂದಿದ್ದಾರೆ. ಅವರ ಸೇವಾ ಅನುಭವ, ಸಂಪರ್ಕ ಆಧಾರದಲ್ಲಿ ಉಪತಹಶೀಲ್ದಾರರು ಹಾಗೂ ಶಿರಸ್ತೆದಾರರರ ಸಂಘವೂ ಜಗದೀಶ ಪೂಜಾರಿ ಅವರನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದೆ. ಸನ್ಮಾನ: ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಜಗದೀಶ ಪೂಜಾರಿ ಅವರನ್ನು ಕಂದಾಯ ನೌಕರರ ಸಂಘ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ಸಂಘದವರು ಸನ್ಮಾನಿಸಿದರು. ಗ್ರೇಡ್-2 ತಹಶೀಲ್ದಾರ್ ಸತೀಶ ಗೌಡ, ಕುಮಟಾ ತಾಲೂಕು ನೌಕರರ ಸಂಘದ ಅಧ್ಯಕ್ಷ ವಿನಾಯಕ ಭಂಡಾರಿ, ಶಿರಸ್ತೆದಾರ ಟಿ ಎಸ್ ಗಾಣಿಗೇರ್, ಸಾಮಂತ, ಉಷಾ ನಾಯ್ಕ, ಸಿಬ್ಬಂದಿ ಶಿವಾನಂದ ಹಳೊಳ್ಳಿ, ಲಕ್ಷ್ಮಣ ಪಾವಸ್ಕರ್, ಎನ್ ಡಿ ಚಿತ್ರಿಗಿ, ಚರಣ ಮರಾಠಿ, ಹೇಮಾ, ತಾಹೀರ ಬಾನು, ತುಳಸಿ ಇತರರು ಇದ್ದರು.