
16:49:00
2025-04-04
ದಾಂಡೇಲಿಯ ಬಡಾಕಾನಶಿರಡಾ ಗ್ರಾಮದ ಗಾವಟಾಣದ ಬಳಿ ರಾಮಾ ಕಾಂಬ್ರೆಕರ ಎಂಬಾತರ ಶವ ಸಿಕ್ಕಿದೆ.
News Details
ದಾಂಡೇಲಿಯ ಬಡಾಕಾನಶಿರಡಾ ಗ್ರಾಮದ ಗಾವಟಾಣದ ಬಳಿ ರಾಮಾ ಕಾಂಬ್ರೆಕರ ಎಂಬಾತರ ಶವ ಸಿಕ್ಕಿದೆ. ಕೆಲಸಕ್ಕೆ ಹೋಗುತ್ತಿದ್ದ ರಾಮಾ ಕಾಂಬ್ರೆಕರ್ ಹೃದಯಘಾತದಿಂದ ಸಾವನಪ್ಪಿರುವ ಬಗ್ಗೆ ಅಂದಾಜಿಸಲಾಗಿದೆ.
ರಾಮಾ ಸಿದ್ದಪ್ಪ ಕಾಂಬ್ರೆಕರ (45) ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಮಾರ್ಚ 30ರ ಸಂಜೆಯಿAದ ಅವರು ಕಾಣೆಯಾಗಿದ್ದರು. ಮಾರ್ಚ 3ರಂದು ಅವರ ಶವ ಸಮೀಪದ ಗದ್ದೆಯಲ್ಲಿ ಕಾಣಿಸಿದೆ.
ಮದ್ಯ ಸೇವನೆಯ ವ್ಯಸನ ಹೊಂದಿದ್ದ ರಾಮಾ ಕಾಂಬ್ರೆಕರ ಅವರು ನಶೆಯ ಗುಂಗಿನಲ್ಲಿ ಬಡಾಖಾನಶಿರಡಾ ಗ್ರಾಮಕ್ಕೆ ಹೋಗುತ್ತಿದ್ದರು. ನಾರಾಯಣ ಬಾದ್ವನಕರ ಇವರ ಜಮೀನಿನಲ್ಲಿ ಸಾಗುವಾಗ ಹೃದಯಘಾತವಾಗಿರುವ ಶಂಕೆಯಿದೆ.
ದಾAಡೇಲಿ ಗ್ರಾಮೀಣ ಪೊಲೀಸ ಠಾಣೆಯ ಪಿಎಎಸ್‌ಐ ಶಿವಾನಂದ ನಾವದಗಿ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಪ್ರಕರಣ ದಾಖಲಾಗಿದ್ದು, ರಾಮಾ ಅವರ ಪತ್ನಿ ವನಿಯಾ ಕಾಂಬ್ರೆಕರ್ ಶವ ಪಡೆದಿದ್ದಾರೆ.