Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
10:54:00 2025-04-05

ಹಿಂದು ಧರ್ ವಿಶಾಲವಾದ ವಿಜ್ಞಾನ' ಎಂದು ಯುವಾ ಬಿಗ್ರೆಡ್ ಸಂಸ್ಥಾಪಕ ಚಕ್ರವರ್ತಿ ಸೂಲೆಬೆಲೆ ಪ್ರತಿಪಾದಿಸಿದ್ದಾರೆ.

News Details

ಹಿಂದು ಧರ್ಮ ವಿಶಾಲವಾದ ವಿಜ್ಞಾನ' ಎಂದು ಯುವಾ ಬಿಗ್ರೆಡ್ ಸಂಸ್ಥಾಪಕ ಚಕ್ರವರ್ತಿ ಸೂಲೆಬೆಲೆ ಪ್ರತಿಪಾದಿಸಿದ್ದಾರೆ. ಶುಕ್ರವಾರ ಸಂಜೆ ಯಲ್ಲಾಪುರದ ಯುಗಾದಿ ಉತ್ಸವ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಪರಕೀಯರ ನಿರಂತರ ಆಕ್ರಮಣ, ದಬ್ಬಾಳಿಕೆ ನಡುವೆಯೂ ಭಾರತದಲ್ಲಿ ಗಟ್ಟಿಯಾಗಿ ಉಳಿದ ಹಿಂದು ಧರ್ಮ ಜಗತ್ತಿನ ಎಲ್ಲಡೆ ವಿಸ್ತರಿಸಿಕೊಂಡಿದೆ. ವೈಚಾರಿಕವಾಗಿ ಹಿಂದು ಧರ್ಮ‌ ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ನಾನು ಹಿಂದು ಎಂದು ಹೇಳಿಕೊಳ್ಳಲು ಪ್ರತಿಯೊಬ್ಬರು ಹೆಮ್ಮೆಪಡಬೇಕು' ಎಂದು ಕರೆ ನೀಡಿದರು.

ಬಿಟ್ಟು ಹೋದವರನ್ನು ಮರಳಿ ತನ್ನಿ!
ಹಿಂದುತ್ವಕ್ಕೆ ಹೊಸ ದಿಕ್ಕು ಬರಬೇಕು. ಪ್ರೀತಿ-ಪ್ರೇಮ ಹೆಸರಿನಲ್ಲಿ ಹಿಂದುತ್ವ ಬಿಟ್ಟು ಹೋದವರನ್ನು ಗೌರವಯುತವಾಗಿ ಹಿಂದು ಧರ್ಮಕ್ಕೆ ಮರಳಿ ಕರೆತರಬೇಕು. ಹಿಂದು ಪ್ರಮುಖರು, ಸ್ವಾಮೀಜಿಗಳು ಈ ಬಗ್ಗೆ ಚಿಂತನೆ ನಡೆಸಬೇಕು' ಎಂದು ಚಕ್ರವರ್ತಿ ಸೂಲಿಬೆಲೆ ವಿನಂತಿಸಿದರು.

ಜಾತಿ ಲೆಕ್ಕಾಚಾರ ಬೇಡ:
'ಮರಾಠರ ಕಾಲದಲ್ಲಿ ಎಲ್ಲರೂ ಹಿಂದು ಎನ್ನುತ್ತಿದ್ದರು. ಜಾತಿ ಗಣತಿ ನಂತರ ಹಿಂದುಗಳನ್ನ ಒಡೆಯಲಾಗಿದ್ದು,‌ ಆಗ ಅನ್ಯಧರ್ಮಿಯರು ಒಂದಾದರು' ಎಂದು ಚಕ್ರವರ್ತಿ ಸೂಲೆಬೆಲೆ ವಿವರಿಸಿದರು. 'ಜಾತಿ ಜಾತಿ ಎಂದು ಜಾತಿ ಲೆಕ್ಕಾಚಾರದ ಬದಲು ಹಿಂದು ಎಂದು ಘರ್ಜಿಸೋಣ. ಹಿಂದುತ್ವ ಎಂಬುದು ಮನೆ ಮನೆಗೆ ತಲುಪಬೇಕು' ಎಂದು ಕರೆ‌ ನೀಡಿದರು. 'ಬ್ರಿಟೀಷರ ಪ್ರತಿರೂಪವಾದ ಕಾಂಗ್ರೆಸ್ ಜಾತಿ ಮೂಲಕ ಹಿಂದುಗಳನ್ನು ಒಡೆಯುತ್ತಿದೆ. ಆದರೆ, ಎಂದಿಗೂ ಮುಸ್ಲಿಂ ಒಳಗಿನ ಜಾತಿಗಳ ಬಗ್ಗೆ ಕಾಂಗ್ರೆಸ್ ಮಾತನಾಡಿದ ಉದಾಹರಣೆಯಿಲ್ಲ' ಎಂದರು.

ಮುಸ್ಲಿಮರು ಹೊರಗಿನವರಲ್ಲ!
'ಮೂಲ ಮುಸ್ಲಿಮರು ಹೊರಗಿನವರಲ್ಲ. ಆದರೆ, ಹೊರಗಿನಿಂದ ಬಂದ ಮುಸ್ಲಿಮರು ಭಾರತವನ್ನು ಒಡೆದರು. ಜಾತಿ ಜಾತಿ ಹೆಸರಿನಲ್ಲಿ ಭಾಗ ಆದಾಗ ಎದುರಿಗಿದ್ದವರು ಒಗ್ಗಟ್ಟಾದರು' ಎಂದು ವಿವರಿಸಿದರು. 'ಅನೇಕ ಭೂಮಿಯನ್ನು ವಕ್ಟ್ ತನ್ನ ಆಸ್ತಿ ಎನ್ನುತ್ತಿದೆ. ಹಿಂದುಗಳ ಭೂ ಭಾಗವನ್ನು ಪಡೆದು ಅದಕ್ಕೆ ಪಾಕಿಸ್ಥಾನ ಎಂದು ಕರೆದುಕೊಂಡ ಮುಸ್ಲಿಮರಿಗೆ ಭಾರತ ಭೂಮಿಗಳು ಏತಕೆ?' ಎಂದು ಪ್ರಶ್ನಿಸಿದರು. 'ವಕ್ಟ್ ಎಂಬುದು ಅತ್ಯಂತ ಅಪಾಯಕಾರಿ ಎಂದು ನಾಲ್ವರು‌ ನ್ಯಾಯಾಧೀಶರು ಅಭಿಪ್ರಾಯಪಟ್ಟರೂ ಕಾಂಗ್ರೆಸ್ ಅದನ್ನು ಒಪ್ಪಿರಲಿಲ್ಲ. 40 ಸಾವಿರ ವಕ್ಟ್ ಪ್ರಕರಣಗಳಿದ್ದು, ಆ ಪೈಕಿ 10 ಸಾವಿರ ಪ್ರಕರಣಗಳನ್ನು‌‌ ಮುಸ್ಲಿಮರೇ ದಾಖಲಿಸಿದ್ದರು.‌ ಮೋದಿ ಸರ್ಕಾರ ಇದೀಗ ವಕ್ಟ್ ಕಾಯ್ದೆ ಬದಲಿಸಿ ಮುಸ್ಲಿಮರಿಗೆ ಸಹ ನೆರವಾಗಿದೆ' ಎಂದರು.

ಮೇಷ್ಟ್ರು ಹೇಳಿದ ಅರ್ದ ಸತ್ಯ!
'ನಾನು ಸಣ್ಣವನಿದ್ದಾಗ ಇತಿಹಾಸ ಶಿಕ್ಷಕರು ಭಾರತ‌ ನೃತದೃಷ್ಟ ದೇಶ ಎನ್ನುತ್ತಿದ್ದರು.‌ ದೇಶದ ಮೇಲೆ ನಡೆದ ನಿರಂತರ ಆಕ್ರಮಣದ ಬಗ್ಗೆ ಅವರು ಮರುಕವ್ಯಕ್ತಪಡಿಸಿದ್ದರು. ಇಷ್ಟು ದಾಳಿ ನಡೆದರೂ ತಡೆಯಲು ಆಗಲಿಲ್ಲ ಎಂಬ ಕಾರಣಕ್ಕೆ ಬೇಸರವಾಗಿತ್ತು. ಆದರೆ, ಆ ಪ್ರಮಾಣದಲ್ಲಿ ದಾಳಿ ನಡೆದರೂ ಹಿಂದುತ್ವ ಉಳಿದಾಗ ಭಾರತದ ಶಕ್ತಿ ಅರ್ಥವಾಯಿತು. ಆ ದಿನ ಮೇಷ್ಟ್ರು ಹೇಳಿದ್ದು ಅರ್ಧ ಸತ್ಯ ಮಾತ್ರವಾಗಿತ್ತು' ಎಂದು ಚಕ್ರವರ್ತಿ ಸೂಲೆಬೆಲೆ ಬಾಲ್ಯದ ಕಥೆ ಹೇಳಿದರು.

'ಧರ್ಮದ ಬುಡ - ಮೋಕ್ಷದ ತುದಿಯಲ್ಲಿ ದುಡಿಯಲು ಪ್ರೋತ್ಸಾಹಿಸುವುದು ಹಿಂದು ಧರ್ಮ.‌ ಬೇರೆಯವರ ಸೇವೆಯಿಂದ ಸ್ವರ್ಗ ಸಾಧ್ಯ ಎಂಬುದು ಹಿಂದು ಧರ್ಮ. ಗೋವು, ನದಿ, ಭೂಮಿಯನ್ನು ತಾಯಿ ಎಂದು ಪೂಜಿಸುವುದು ಹಿಂದು ಧರ್ಮ. ಕುಂಬಮೇಳ, ಅಯೋಧ್ಯೆ ರಾಮ‌ ಮಂದಿರ ನಮ್ಮ ಕಾಲಾವಧಿಯಲ್ಲಿ ನಡೆದಿರುವುದು ನಮ್ಮ‌ಭಾಗ್ಯ. ಹಿಂದು ಧರ್ಮದಲ್ಲಿ ಹುಟ್ಟಿದ್ದು ನಮ್ಮೆಲ್ಲರ ಪುಣ್ಯ. ಹಿಂದು ಧರ್ಮದ ಶಿಕ್ಷಣ ಮನೆ ಮನೆಯಲ್ಲಿಯೂ ಬೆಳಗಬೇಕು' ಎಂದು ಕರೆ‌ ನೀಡಿದರು.

ಸಿದ್ದಾಪುರ ಶಿರಳಗಿಯ ಚೈತನ್ಯ ರಾಜಾರಾಮ ಕ್ಷೇತ್ರದ ಭ್ರಹ್ಮಾನಂದ ಸರಸ್ವತಿ ಶ್ರೀ ಆಶೀರ್ವಚನ ನೀಡಿ 'ಯಾವಾಗ ಭಾರತ ದೇಶ ಸನಾತನ ಧರ್ಮದ ತಳಹದಿಯ ಮೇಲೆ ಸ್ಥಾಪನೆಯಾಗುವುದೋ ಅಂದು ಭಾರತ ಸ್ವಾತಂತ್ರ್ಯ ಪಡೆದಂತೆ' ಎಂದು ಹೇಳಿದರು. 'ಯಾವ ದೇಶಕ್ಕೆ ತನ್ನ ಸಂಸ್ಕೃತಿ ಪರಂಪರೆಯ ಬಗ್ಗೆ ಗೌರವ ಇರುತ್ತದೆಯೋ ಆ ದೇಶ ಉದ್ಧಾರ ಆಗಲು ಸಾಧ್ಯ' ಎಂದರು. ನಾಗರಾಜ ನಾಯ್ಕ ಮಾತನಾಡಿ 'ಹಿಂದುತ್ವ ಎಂಬುದು ಡಿಜೆ ಸದ್ದಿಗೆ ಮಾತ್ರ ಸೀಮಿತವಾಗಿರಬಾರದು' ಎಂದರು.

ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ, ಪ್ರಮುಖರಾದ ಪ್ರದೀಪ ಯಲ್ಲಾಪುರಕರ, ಗಣಪತಿ ಧೂಳಿ ಇದ್ದರು. ರಾಮಕೃಷ್ಣ ಕವಡಿಕೆರೆ ಸ್ವಾಗತಿಸಿದರು. ಚಂದ್ರಹಾಸ ನಾಯ್ಕ ನಿರ್ವಹಿಸಿದರು. ಸುಜಲ್ ದುರಂದರ ಪ್ರಾರ್ಥಿಸಿದರು. ಗಣೇಶ ಬಂಟ ಅವರು ರಚಿಸಿದ ಹಿಂದು ದಿನ ದರ್ಶಿಕೆಯನ್ನು ವೇದಿಕೆಯಲ್ಲಿ ಬಿಡುಗಡೆ‌‌ ಮಾಡಲಾಯಿತು.