Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
22:11:00 2025-04-05

.ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಾಮೂಹಿಕ ಭದ್ರತೆಗೆ ಭಾರತ ಸದಾ ಬಧ್ದವಾಗಿದೆ - ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್

News Details

ಹಿಂದು ಮಹಾಸಾಗರ ವ್ಯಾಪ್ತಿಯಲ್ಲಿ ಚೀನಾ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಿದ್ದರಿಂದ ಭಾರತವೂ ಸಾಗರ ಕಾರ್ಯಾಚರಣೆಗೆ ಸಿದ್ಧವಾಗಿದೆ. 9 ಮಿತ್ರ ರಾಷ್ಟ್ರಗಳ ಒಡಗೂಡಿ ಭಾರತ ಈ ಕಾರ್ಯಾಚರಣೆ ನಡೆಸಲಿದ್ದು, ರಾಷ್ಟ್ರೀಯ ಸಾಗರ ದಿನ ಶನಿವಾರ ರಕ್ಷಣಾ ಸಚಿವ ರಾಜನಾಥ ಸಿಂಗ್ ಇದಕ್ಕೆ ಚಾಲನೆ ನೀಡಿದ್ದಾರೆ.

ಹಿಂದು ಮಹಾಸಾಗರ ವಲಯ ವ್ಯಾಪ್ತಿಗೆ IOS SAGAR ಹೆಸರಿನ ಹಡಗು ನಿಯೋಜಿಸಲಾಗಿದೆ. ಈ ಹಡಗು ಕೊಚ್ಚಿಯಲ್ಲಿ ತನ್ನ ಸಮುದ್ರ ಪರಿಕ್ರಮ ಹಾಗೂ ಬಂದರು ಪರಿಶೀಲನೆ ನಡೆಸಿಕೊಂಡು ಕಾರವಾರಕ್ಕೆ ಆಗಮಿಸಿದೆ. ಹಿಂದು ಮಹಾಸಾಗರ ವಲಯದಲ್ಲಿ ಮೇ ಮೊದಲ ವಾರದವರೆಗೂ ಈ ಹಡಗು ಇರಲಿದ್ದು, ನೌಕೆಯು ಭಾರತ ಪಶ್ಚಿಮ ಕರಾವಳಿಯ ಸ್ಪೆಷಲ್ ಇಕನಾಮಿಕ್ ಜೋನ್ ವ್ಯಾಪ್ತಿಯಲ್ಲಿ ಗಸ್ತು ತಿರುಗಲಿದೆ. ಈ ನೌಕೆಯಲ್ಲಿ ಕೇನ್ಮಾ ಮಡ್ಯಾಸ್ಕರ್, ಮಾಲೀಷ್ ಮಾರಿಶಸ್, ಮೊಝಾಂಬಿಕ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಕೊಮೊರೋಸ್ ಸೇಂಚ್ ಹೆಲ್ಸ್ ಸೇರಿ 9 ದೇಶಗಳ 44 ಸಿಬ್ಬಂದಿ ಇರಲಿದ್ದಾರೆ.

ಅಲ್ಲಿರುವ ಸಿಬ್ಬಂದಿಗೆ ಸಾಗರ, ರಕ್ಷಣೆ, ಗಸ್ತು, ಹಡಗುಗಳ ಪರಿಶೀಲನೆ, ಅಕ್ರಮಗಳ ತಡೆ, ಅಗ್ನಿ ಶಮನ, ಸಾಗರ ಸಂವಹನ, ಸೀಮನ್‌ಶಿವ್, ಸಾಗರ ಮಧ್ಯದ ಸವಾಲುಗಳನ್ನು ಪರಿಶೀಲಿಸುವ ತರಬೇತಿ ನೀಡಲಾಗುತ್ತದೆ. ಹಿಂದು ಮಹಾಸಾಗರ ವ್ಯಾಪ್ತಿಯ ಭಾರತ ಮಿತ್ರ ರಾಷ್ಟ್ರಗಳ ನಡುವೆ ಸಮುದ್ರ ವ್ಯವಹಾರದ ಬಾಂಧವ್ಯ ವೃದ್ಧಿ, ಪರಸ್ಪರ ಸಹಕಾರ ವೃದ್ಧಿ ಮಾಡಿಕೊಳ್ಳುವ ಜತೆಗೆ ಹಿಂದು ಮಹಾಸಾಗರದ ರಕ್ಷಣೆಗೆ ಭಾರತ ಮುಂದಾಗಿದೆ.

ಕಾರವಾರದ ಐಎನ್‌ಎಸ್ ಕದಂಬದಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ `ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಾಮೂಹಿಕ ಭದ್ರತೆಗೆ ಭಾರತ ಸದಾ ಬಧ್ದವಾಗಿದೆ' ಎಂದು ಹೇಳಿದ್ದಾರೆ. `ಐಒಎಸ್ ಸಾಗರ್ ಉಡಾವಣೆಯೂ ಸಮುದ್ರ ಕ್ಷೇತ್ರದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಾಮೂಹಿಕ ಭದ್ರತೆಗೆ ಭಾರತದ ಬದ್ಧತೆಯ ಪ್ರತಿಬಿಂಬವಾಗಿದ್ದು, ಹಿಂದೂ ಮಹಾಸಾಗರÀದಲ್ಲಿ ಭಾರತದ ಹೆಚ್ಚುತ್ತಿರುವ ಉಪಸ್ಥಿತಿಯ ಮಹತ್ವ ಸಾರಲಿದೆ. ಇದು ನಮ್ಮ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮಾತ್ರ ಸಂಬAಧಿಸಿಲ್ಲ. ಈ ಪ್ರದೇಶದಲ್ಲಿನ ನಮ್ಮ ಸ್ನೇಹಪರ ರಾಷ್ಟçಗಳ ನಡುವಿನ ಹಕ್ಕುಗಳು ಮತ್ತು ಕರ್ತವ್ಯಗಳ ಸಮಾನತೆಯತ್ತಲೂ ಗಮನ ಸೆಳೆಯುತ್ತದೆ' ಎಂದವರು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಪ್ರಾಜೆಕ್ಟ್ ಸೀಬರ್ಡ್ ಅಡಿಯಲ್ಲಿ ನಿರ್ಮಿಸಲಾದ 2,000 ಕೋಟಿ ರಪಾಯಿಗೂ ಹೆಚ್ಚು ಮೌಲ್ಯದ ಆಧುನಿಕ ಕಾರ್ಯಾಚರಣೆ, ದುರಸ್ತಿ ಮತ್ತು ಲಾಜಿಸ್ಟಿಕ್ ಸೌಲಭ್ಯಗಳನ್ನು ಸಚಿವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ, ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್, ಜಿಲ್ಲಾಧಿಕಾರಿ ಕೆ.ಲಕ್ಷಿö್ಮÃಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಇತರರು ಇದ್ದರು.