Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
22:03:00 2025-04-05

ವೆಸ್ಟಕೋಸ್ಟ್ ಪೆಪರ್ ಮಿಲ್ಲಿನಲ್ಲಿ ಕಳ್ಳತನ..

News Details

ದಾಂಡೇಲಿಯ ವೆಸ್ಟಕೋಸ್ಟ್ ಪೆಪರ್ ಮಿಲ್ಲಿನಲ್ಲಿ ಕಳ್ಳತನ ನಡೆದಿದೆ. ಮೂವರು ಕಳ್ಳರು ತಮ್ಮ ಕೈ ಚಳಕ ಪ್ರದರ್ಶಿಸಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಾರ್ಚ 31ರ ರಾತ್ರಿ 11ಗಂಟೆ ನಂತರ ಏಪ್ರಿಲ್ 1ರ 12.20ರವರೆಗೆ ದಾಂಡೇಲಿಯ ವೆಸ್ಟಕೋಸ್ಟ್ ಪೆಪರ್ ಮಿಲ್ಲಿನೊಳಗೆ ಪ್ರವೇಶಿದ ಕಳ್ಳರು ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ. ಈ ವೇಳೆ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಮೋಹನ್ ಹಂಜಿ ಅವರನ್ನು ಕಳ್ಳರು ಯಾಮಾರಿಸಿದ್ದಾರೆ.

ಕಂಪನಿ ಆವರಣದ ಗುಜುರಿ ಯಾರ್ಡಿಗೆ ಭೇಟಿ ನೀಡಿದ ಕಳ್ಳರು ಅಲ್ಲಿನ ಕಂಟೇನರ್ ಬೀಗ ಒಡೆದಿದ್ದಾರೆ. ಅದಾದ ನಂತರ ತಾಮ್ರ ಹಾಗೂ ಹಿತ್ತಾಳೆಯ ಸಾಮಗ್ರಿಗಳನ್ನು ಅಪಹರಿಸಿದ್ದಾರೆ. ಒಟ್ಟು 40 ಸಾವಿರ ರೂ ಮೌಲ್ಯದ ಸಾಮಗ್ರಿಗಳು ಕಾಣೆಯಾಗಿದೆ. ಕಳ್ಳರು ಅಲ್ಲಿಂದ ಹೋದ ನಂತರ ಭದ್ರತಾ ಸಿಬ್ಬಂದಿ ಮೋಹನ ಹಂಜಿ ಅವರಿಗೆ ವಿಷಯ ಗೊತ್ತಾಗಿದೆ.
ಕಂಟೇನರ್ ಬೀಗ ಒಡೆದಿದನ್ನು ನೋಡಿ ಅವರು ಸೆಕ್ಯುರಿಟಿ ಮ್ಯಾನೇಜರ್ ಸದಾನಂದ ಪಟೇಲ್ ಅವರಿಗೆ ಮಾಹಿತಿ ನೀಡಿದ್ದಾರೆ. ಸದಾನಂದ ಪಟೇಲ್ ಅವರು ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಮೂವರು ಕಳ್ಳರು ಬಂದು ಹೋಗಿರುವುದು ಗೊತ್ತಾಗಿದೆ.

ಈ ಹಿನ್ನಲೆ ಅವರು ದಾಂಡೇಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. `ಆ ಕಳ್ಳರನ್ನು ಹುಡುಕಿ, ಕಳ್ಳತನವಾದ ಸಾಮಗ್ರಿಗಳನ್ನು ಮರಳಿಸಿ' ಎಂದವರು ಪೊಲೀಸರಲ್ಲಿ ಕೋರಿಕೊಂಡಿದ್ದಾರೆ.