
0:00:00
2025-04-05
ಈ ವರ್ಷದ ಮೊದಲ ಕೆ ಎಫ್ ಡಿ ಪ್ರಕರಣ ಪತ್ತೆ
News Details
ಸಿದ್ದಾಪುರ : ತಾಲೂಕಿನ ಕಾನಸೂರ ಸಮೀಪದ ಕೊಡಸರ ದಲ್ಲಿ ಈ ವರ್ಷದ ಮೊದಲ ಕೆ ಎಫ್ ಡಿ ಪ್ರಕರಣ ಪತ್ತೆಯಾಗಿದೆ ಎಂದು ತಾಲೂಕ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೂಲಿ ಕೆಲಸಕ್ಕೆ ಬಂದ ಹಾನಗಲ್ ಮೂಲದ ವ್ಯಕ್ತಿಯಲ್ಲಿ ಕೆ ಎಫ್ ಡಿ ಪಾಸಿಟಿವ್ ದೃಢ ಪಟ್ಟಿದೆ.
14 ವರ್ಷದ ಬಾಲಕನಲ್ಲಿ ಪ್ರಕರಣ ದೃಢ ಪಟ್ಟಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ಅರೋಗ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಭೇಟಿ ನೀಡಿ ಸೂಕ್ತ ಚಿಕಿತ್ಸೆ ಒದಗಿಸಿ ಜಾಗೃತಿ ವಹಿಸುವಂತೆ ತಿಳಿ ಹೇಳಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಕೆ ಎಫ್ ಡಿ ಕಾಯಿಲೆ ಹಲವಾರು ಜನರ ಪ್ರಾಣ ಬಲಿ ಪಡೆದಿದ್ದು ಈ ವರ್ಷ ಇದುವರೆಗೂ ಇಲ್ಲದ ಪ್ರಕರಣ ಈಗ ಕಾಣಿಸಿಕೊಂಡಿರುವುದರಿಂದ ಸಹಜವಾಗಿ ಜನತೆಯಲ್ಲಿ ಆತಂಕ ಎದುರಾಗಿದೆ.