
ಶಿರಸಿಗೆ ಕುಡಿಯುವ ನೀರು ಸರಬರಾಜು ಮಾಡುವ ಕಬ್ಬಿಣದ ಪೈಪ್ ಕಳ್ಳತನ ವಿಷಯವಾಗಿ ಬುಧವಾರ ಕಾಂಗ್ರೆಸ್ ಪ್ರತಿಭಟಿಸಿದ್ದು, ಗುರುವಾರ ಬಿಜೆಪಿ ಸಹ ಪ್ರತಿಭಟನೆ ನಡೆಸಿದೆ.
News Details
ಶಿರಸಿಗೆ ಕುಡಿಯುವ ನೀರು ಸರಬರಾಜು ಮಾಡುವ ಕಬ್ಬಿಣದ ಪೈಪ್ ಕಳ್ಳತನ ವಿಷಯವಾಗಿ ಬುಧವಾರ ಕಾಂಗ್ರೆಸ್ ಪ್ರತಿಭಟಿಸಿದ್ದು, ಗುರುವಾರ ಬಿಜೆಪಿ ಸಹ ಪ್ರತಿಭಟನೆ ನಡೆಸಿದೆ. ಜೊತೆಗೆ ನಗರಸಭೆಗೆ ಚುನಾಯಿತರಾದ ಬಿಜೆಪಿ ಸದಸ್ಯರು ಈ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಅವರ ಸದಸ್ಯತ್ವ ರದ್ಧುಪಡಿಸುವುದಾಗಿಯೂ ಬಿಜೆಪಿ ಭರವಸೆ ನೀಡಿದೆ. `ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನು ಜೈಲಿಗೆ ಕಳುಹಿಸಬೇಕು' ಎಂದು ಬಿಜೆಪಿಗರು ಗುಡುಗಿದ್ದಾರೆ. ಸಹಾಯಕ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಬಿಜೆಪಿ ನಗರ ಘಟಕ ಮತ್ತು ನಗರಸಭೆ ಸದಸ್ಯ ಆನಂದ ಸಾಲೇರ ಈ ಬಗ್ಗೆ ಮಾಹಿತಿ ನೀಡಿದರು. `ಕೆಂಗ್ರೆನಾಲಾದಿAದ ನಗರಸಭೆಗೆ ಸೇರಿದ ಬೀಡು ಕಬ್ಬಿಣದ ಹಳೆಯ ಪೈಪ್ ಕಳ್ಳತನ ಆಗಿರುವ ಪ್ರಕರಣವನ್ನು ಭೇದಿಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುಬೇಕು' ಎಂದು ಅವರು ಆಗ್ರಹಿಸಿದರು. ಈ ವೇಳೆ ಬಿಜೆಪಿ ಜಿಲ್ಲಾ ಮುಖಂಡ ನಂದನ ಸಾಗರ ಮಾತನಾಡಿ `ಈ ಪ್ರಕರಣದಲ್ಲಿ ಬಿಜೆಪಿ ಸದಸ್ಯರಿದ್ದರೆ ಯಾವುದೇ ಮುಲಾಜಿಲ್ಲದೇ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುತ್ತೇವೆ. ಪೊಲೀಸರ ತನಿಖೆಗೂ ಸಹಕಾರ ನೀಡುತ್ತೇವೆ' ಎಂದು ಘೋಷಿಸಿದರು. `ಈ ಕಳ್ಳತನ ಪ್ರಕರಣದಿಂದ ನಗರಸಭೆ ಹಾಗೂ ಅಲ್ಲಿನ ಸಜ್ಜನ ಸದಸ್ಯರಿಗೂ ಇರುಸು-ಮುರುಸಾಗಿದೆ' ಎಂದರು. ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ನಗರಸಭೆ ಉಪಾಧ್ಯಕ್ಷ ರಮಾಕಾಂತ ಭಟ್ಟ, ನಗರಸಭೆ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ ಸೇರಿ ಅನೇಕರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.