
14:27:00
2025-04-07
ಸಾಗವಾನಿ ಮರ ಕಡಿತ: ಯಲ್ಲಾಪುರದಲ್ಲಿ ಮೂವರು ವಶಕ್ಕೆ
News Details
ಯಲ್ಲಾಪುರದ ಇಡಗುಂದಿ ಅರಣ್ಯ ವ್ಯಾಪ್ತಿಯಲ್ಲಿ ಸಾಗವಾನಿ ಮರ ಕಡಿತ ಆರೋಪದ ಅಡಿ ಅರಣ್ಯ ಅಧಿಕಾರಿಗಳು ಮೂವರನ್ನು ವಶಕ್ಕೆಪಡೆದಿದ್ದಾರೆ.
ಕಾಡಿನಲ್ಲಿದ್ದ ಮರ ಕಡಿತು ಸಾಗಿಸುವ ಪ್ರಯತ್ನದಲ್ಲಿದ್ದ ಮಹಾಬಲೇಶ್ವರ ಹರಿಕಂತ್ರ, ಸಂದೀಪ ನಾಯ್ಕ ಹಾಗೂ ಸುರೇಶ ಗೌಡ ಅವರ ವಿಚಾರಣೆ ಮುಂದುವರೆದಿದೆ. ಅಧಿಕಾರಿಗಳ ದಾಳಿಯ ವೇಳೆ ನಾರಾಯಣ ನಾಯಕ ಹಾಗೂ ರವಿ ಹುಲಸ್ವಾರ್ ಎಂಬಾತರು ತಪ್ಪಿಸಿಕೊಂಡಿದ್ದಾರೆ.
ಹಿಲ್ಲೂರಿನ ಮಹಾಬಲೇಶ್ವರ ಹರಿಕಂತ್ರ ಈ ಹಿಂದೆಯೂ ವಿವಿಧ ಅರಣ್ಯ ಅಪರಾಧದಲ್ಲಿ ಭಾಗಿಯಾಗಿದ್ದು, ಮಹಾಬಲೇಶ್ವರ ಹರಿಕಂತ್ರ ವಿರುದ್ಧ ಅನೇಕ ಪ್ರಕರಣಗಳಿವೆ. ಇಡಗುಂದಿ ವಲಯ ಅರಣ್ಯಾಧಿಕಾರಿ ಮಂಜುನಾಥ ನಾಯಕ ನೇತ್ರತ್ವದಲ್ಲಿ ಈ ದಾಳಿ ನಡೆದಿದೆ. ತಪ್ಪಿಸಿಕೊಂಡಿರುವ ನಾರಾಯಣ ನಾಯಕ ಹಾಗೂ ರವಿ ಹುಲಸ್ವಾರ್ ಪತ್ತೆಗೆ ಹುಡುಕಾಟ ಮುಂದುವರೆದಿದೆ.
ಕಾಡಿನಲ್ಲಿ ಅಡಗಿಸಿಟ್ಟಿದ್ದ 2.50 ಲಕ್ಷ ರೂ ಮೌಲ್ಯದ ಮರದ ತುಂಡುಗಳನ್ನು ಅಧಿಕಾರಿಗಳು ಜಪ್ತು ಮಾಡಿದ್ದಾರೆ. 2.161 ಕ್ಯುಬಿಕ್ ಮೀಟರ್ ಗಾತ್ರದ ಸಾಗವಾನಿ ಜೊತೆ ಸೀಸಂ ಮರಗಳು ಅಲ್ಲಿ ಸಿಕ್ಕಿವೆ.