
ಐಪಿಎಲ್ ಬೆಟ್ಟಿಂಗ್ ದಂಧೆ: ಮುಂಡಗೋಡಿನ ವ್ಯಕ್ತಿ ಅರೆಸ್ಟ್
News Details
ಸದ್ಯ ಪಂಜಾಬಿನ ಛಂಡಿಗರದಲ್ಲಿರುವ ಮಹಾರಾಜ ಯಧುವೀರ ಸಿಂಗ್ ಸ್ಟೇಡಿಯಂ'ನಲ್ಲಿ ಕ್ರಿಕೆಟ್ ನಡೆಯುತ್ತಿದೆ. ರಾಜಸ್ಥಾನ ಹಾಗೂ ಪಂಚಾಬ್ ತಂಡದ ನಡುವೆ ನಡೆಯುವ ಹಣಾಹಣಿಯಲ್ಲಿ ಗೆಲ್ಲುವ ತಂಡದ ಅಂದಾಜಿನ ಮೇಲೆ ಮುಂಡಗೋಡು ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಎದುರು ಜನ ಹಣ ಹೂಡುತ್ತಿದ್ದರು. ಈ ರೀತಿ ಅಕ್ರಮವಾಗಿ ಕಾಸು ಮಾಡಿಕೊಳ್ಳಲು ನಿರ್ಧರಿಸಿದವರ ಮೇಲೆ ಪೊಲೀಸ್ ಪ್ರಕರಣ ದಾಖಲಾಗಿದೆ.
ಮುಂಡಗೋಡು ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಎದುರು ಅಂಬೇಡ್ಕರ ಓಣಿಯ ಮಂಜುನಾಥ ಕೋರವರ್, ಆನಂದನಗರದ ವೆಂಕಟೇಶ ಅರಿವಾಣ, ಗದಗದ ಮಂಜುನಾಥ ಅಸಗಿ, ಚಿಗಳ್ಳಿಯ ಹರೀಶ ಬಾಳೆಮ್ಮನವರ್ ಸೇರಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು. ರಸ್ತೆಯಲ್ಲಿ ಹೋಗಿ-ಬರುವವರನ್ನು ಕರೆದು ಬೆಟ್ಟಿಂಗ್ ದಂಧೆಯಲ್ಲಿ ಹಣ ತೊಡಗಿಸುವಂತೆ ಅವರೆಲ್ಲರೂ ಪ್ರೇರೇಪಿಸುತ್ತಿದ್ದರು.
ಈ ವಿಷಯ ಅರಿತ ಪೊಲೀಸರು ಅವರ ಮೇಲೆ ದಾಳಿ ನಡೆಸಿದರು. ಆಗ, ಮಂಜುನಾಥ ಕೋರವರ್ ಸಿಕ್ಕಿ ಬಿದ್ದರು. ಉಳಿದ ಮೂವರು ಓಡಿ ಪರಾರಿಯಾದರು. ಸಿಕ್ಕಿಬಿದ್ದ ಮಂಜುನಾಥ ಕೋರವರ್ ಬಳಿ 2300ರೂ ಹಣ, ಮೊಬೈಲ್, ಕ್ರಿಕೆಟ್ ಬೆಟ್ಟಿಂಗ್ ಬರೆದ ಪಟ್ಟಿ-ಪೆನ್ನುಗಳು ಇದ್ದವು. ಅವೆಲ್ಲವನ್ನು ಪೊಲೀಸರು ವಶಕ್ಕೆಪಡೆದರು.
ಪೊಲೀಸ್ ಅಧೀಕ್ಷಕ ಎಂ ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ನಾಯ್ಕ, ಶಿರಸಿ ಡಿವೈಎಸ್ಪಿ ಗಣೇಶ ಕೆ ಎಲ್ ಅವರಿಗೆ ಮಾಹಿತಿ ನೀಡಿ ಮುಂಡಗೋಡು ಸಿಪಿಐ ರಮೇಶ ನೀಲಮ್ಮನವರ್ ಕಾರ್ಯಾಚರಣೆ ನಡೆಸಿದರು. ಪೊಲೀಸ್ ಸಿಬ್ಬಂದಿ ಮಹಾಂತೇಶ ಮುಧೋಳ, ಅನ್ವರ ಬಮ್ಮನಗಟ್ಟಿ, ನಾಗಪ್ಪ ಎಂ ಕಾರ್ಯಾಚರಣೆಯಲ್ಲಿದ್ದರು.