Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-08

ತದಡಿ ಬಂದರಿನಲ್ಲಿ ಅನುಮಾನಾಸ್ಪದ ಚಟುವಟಿಕೆ – ನಕಲಿ ಪೊಲೀಸರ ಬಂಧನ

News Details

ತದಡಿ ಬಂದರಿನ ಮೇಲೆ ಆಕ್ರಮಣ ನಡೆಸಲು ಸಜ್ಜಾಗಿದ್ದ ಆಗಂತುಕರನ್ನು ಕರಾವಳಿ ಪೊಲೀಸ್ ಪಡೆಯವರು ಸೆದೆಬಡಿದಿದ್ದಾರೆ. ಆದರೆ, ಇಲ್ಲಿ ಸಿಕ್ಕಿಬಿದ್ದ ಆಗಂತುಕರು ಸಹ ಪೊಲೀಸರೇ ಆಗಿದ್ದಾರೆ!

ಪೊಲೀಸರ ಕಾರ್ಯಕ್ಷಮತೆ ಪರೀಕ್ಷೆಗಾಗಿ ಕರಾವಳಿ ಭಾಗದಲ್ಲಿ ಆಗಾಗ ಸಾಗರ ಕವಚ ಎಂಬ ಅಣಕು ಕಾರ್ಯಾಚರಣೆ ನಡೆಯುತ್ತದೆ. ಪೊಲೀಸರೇ ಕಳ್ಳರ ವೇಷ ಧರಿಸಿ ಆಕ್ರಮಣ ನಡೆಸುತ್ತಾರೆ. ಆ ಆಕ್ರಮಣ ತಡೆಯುವುದು ಕರ್ತವ್ಯನಿರತ ಪೊಲೀಸರ ಕೆಲಸ. ಮಂಗಳವಾರದಿoದ ಈ ಅಣಕು ಕಾರ್ಯಾಚರಣೆ ಶುರುವಾಗಿದ್ದು, ಮೊದಲ ದಿನವೇ ಬಂದರು ಮೇಲೆ ದಂಡೆತ್ತಿ ಬಂದ `ಕಳ್ಳ ಪೊಲೀಸರು' ಸಿಕ್ಕಿ ಬಿದ್ದಿದ್ದಾರೆ!

ಗಂಗಾವಳಿ ಸಮೀಪದ ಸಮುದ್ರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕಾಣಿಸಿದ ಬೋಟನ್ನು ಪೊಲೀಸರು ವಶಕ್ಕೆಪಡೆದರು. ಆಗ, ಅದರಲ್ಲಿ ನೌಕಾಪಡೆಯ `ರೆಡ್ ಪೋರ್ಸ' ಎಂಬ ಹೆಸರಿನ ನಕಲಿ ಆಗಂತುಕರು ಕಾಣಿಸಿದರು. ಕೂಡಲೇ ಅವರೆಲ್ಲರನ್ನು ಪೊಲೀಸರು ಹಿಡಿದರು. ಸಿಕ್ಕಿಬಿದ್ದವರನ್ನು ತದಡಿ ಬಂದರಿಗೆ ತರಲಾಯಿತು. ಎಲ್ಲಾ ಬಗೆಯ ಕಾನೂನು ಪ್ರಕ್ರಿಯೆ ಮುಗಿಸಿ ಅವರನ್ನು ಬಿಡುಗಡೆ ಮಾಡಲಾಯಿತು.

ಕರಾವಳಿ ಕವಾಲು ಪಡೆಯ ಪಿಐ ಸಂಪತ್ ಇ ಸಿ ಸಮುದ್ರ ಗಸ್ತು ತಿರುಗಿದರು. ಎಎಸ್‌ಐ ಮಂಜುನಾಥ ಪಟಗಾರ, ಲಕ್ಷಿö್ಮÃಶ ,ಪ್ರದೀಪ ನಾಯ್ಕ, ದಿನೇಶ ನಾಯ್ಕ, ಬೋಟಿನ ಕ್ಯಾಪ್ಟನ್ ಆನಂದು ಗಾಂವಕರ, ಅಸ್ಟಿಂಟ್ ಬೋಟ್ ಕ್ಯಾಪ್ಟನ್ ಶ್ರೀನಾಸ ದುರ್ಗೇಕರ, ಸಂಜೀವ ನಾಯಕ, ಎಲ್ ಎಮ್ ಎಲ್ ಸಂತೋಷ ಹರಿಕಂತ್ರ ಕಲಾಸಿ ಸೇರಿ 9 ಜನ ನಕಲಿ ಆಗಂತುಕರನ್ನು ಹಿಡಿದರು.