
0:00:00
2025-04-09
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಸಮಾನ ಅಂಕ ಪಡೆದ ರಕ್ಷಾ ಹಾಗೂ ದಕ್ಷ ಹೆಗಡೆ
News Details
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎರಡು ಅಂಕ ವ್ಯತ್ಯಾಸದಲ್ಲಿದ್ದ ರಕ್ಷಾ ಹೆಗಡೆ ಹಾಗೂ ದಕ್ಷ ಹೆಗಡೆ ಪಿಯುಸಿಯಲ್ಲಿ ಸಮಾನ ಅಂಕಪಡೆದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ರಕ್ಷಾ ಹೆಗಡೆ ಹಾಗೂ ದಕ್ಷಾ ಹೆಗಡೆ ಅವಳಿ ಮಕ್ಕಳು. ಈ ಇಬ್ಬರು ವಿದ್ಯಾರ್ಥಿಗಳು ಬೆಂಗಳೂರಿನ ದೀಕ್ಷಾ ಕಾಲೇಜಿನ ವಿದ್ಯಾರ್ಥಿಗಳು. ಮಕ್ಕಳ ತಜ್ಞ ಡಾ ದಿನೇಶ ಹೆಗಡೆ ಹಾಗೂ ರೋಗಶಾಸ್ತ ಸಲಹೆಗಾರ್ತಿ ಡಾ ಸುಮನ್ ಹೆಗಡೆ ಅವರ ಪಾಲಕರು. ದಕ್ಷ ಹೆಗಡೆ ಅವರು ನಾಲ್ಕು ವಿಷಯದಲ್ಲಿ 100 ಅಂಕ ಪಡೆದಿದ್ದಾರೆ. ರಕ್ಷಾ ಹೆಗಡೆ ಎರಡು ವಿಷದಲ್ಲಿ 100 ಅಂಕ ಪಡೆದಿದ್ದಾರೆ. ಒಟ್ಟಾರೆ 600 ಅಂಕದಲ್ಲಿ ಈ ಇಬ್ಬರು ಮಕ್ಕಳು 594 ಅಂಕಪಡೆದು ಶೇ 99ರ ಸಾಧನೆ ಮಾಡಿದ್ದಾರೆ.