
ಇಟಗುಳಿಯಲ್ಲಿ ಇಸ್ಪಿಟ್ ಆಟದ ಮೇಲೆ ಪೊಲೀಸ್ ದಾಳಿ, 13 ಬಂಧನ
News Details
ಶಿರಸಿ ಕೆಳಗಿನ ಇಟಗುಳಿಯಲ್ಲಿ ಇಸ್ಪಿಟ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. 13 ಜನ ಸಿಕ್ಕಿ ಬಿದ್ದಿದ್ದು, ಅವರೆಲ್ಲರನ್ನು ಪೊಲೀಸರು ಬಂಧಿಸಿದ್ದಾರೆ.
ಕೆಳಗಿನ ಇಟಗುಳಿಯ ರಾಮಚಂದ್ರ ಹೆಗಡೆ ಅವರು ಏಪ್ರಿಲ್ 8ರಂದು ಇಸ್ಪಿಟ್ ಆಟಕ್ಕಾಗಿ ತಮ್ಮ ಸ್ನೇಹಿತರನ್ನು ಮನೆಗೆ ಆಮಂತ್ರಿಸಿದ್ದರು. ಮೇಲಿನ ಇಟಗುಳಿಯ ಕೃಷಿಕ ಮಂಜುನಾಥ ಹೆಗಡೆ, ಶಿರಸಿ ಓಣಿಕೇರಿಯ ಎಲ್‌ಐಸಿ ಎಜೆಂಟ್ ಕೇಶವ ಹೆಗಡೆ, ನೀರ್ನಳ್ಳಿಯ ಮಂಜುನಾಥ ಹೆಗಡೆ, ಕೊಪ್ಪದ ಮಹೇಶ ಹೆಗಡೆ ಅಲ್ಲಿಗೆ ಆಗಮಿಸಿದ್ದರು.
ನೀರ್ನಳ್ಳಿಯ ನಾರಾಯಣ ಹೆಗಡೆ, ಮೇಲಿನ ಇಟಗುಳಿಯ ವಿನಯ ಹೆಗಡೆ, ಮುಂಡಗೇಸರ ಬೆಳ್ಳಿಕೇರಿಯ ಕಮಲಾಕರ ಭಟ್ಟ, ಕೆಳಗಿನ ಇಟಗುಳಿಯ ಆನಂದ ಹೆಗಡೆ ಸಹ ಅವರ ಜೊತೆಯಾದರು. ಇಟಗುಳಿ ಅಂದಲಿಯ ಮಂಜುನಾಥ ಹೆಗಡೆ, ಮೇಲಿನ ಇಟಗುಳಿಯ ಗಣಪತಿ ಹೆಗಡೆ, ಕೊಪ್ಪದ ಬಲೇಶ್ವರ ಹೆಗಡೆ ಹಾಗೂ ಮೇಲಿನ ಇಟಗುಳಿಯ ಗಣಪತಿ ಹೆಗಡೆ ಸಹ ಆಗಮಿಸಿ ಇಸ್ಪಿಟ್ ಆಟ ಶುರು ಮಾಡಿದ್ದರು.
ಈ ವೇಳೆ ಶಿರಸಿ ಗ್ರಾಮೀಣ ಠಾಣಾ ಪಿಎಸ್‌ಐ ಸಂತೋಷಕುಮಾರ್ ಅದೇ ಭಾಗದಲ್ಲಿ ಗಸ್ತು ತಿರುಗುತ್ತಿದ್ದರು. `ಕೆಳಗಿನ ಇಟಗುಳಿಯ ರಾಮಚಂದ್ರ ಹೆಗಡೆ ಅವರ ಮನೆಯಲ್ಲಿ ರಾಮಚಂದ್ರ ಹೆಗಡೆ ಅವರು ಹಣ ಹೂಡಿ ಇಸ್ಪಿಟ್ ಆಡಿಸುತ್ತಿದ್ದಾರೆ' ಎಂದು ಪೊಲೀಸರಿಗೆ ಅಲ್ಲಿನವರೊಬ್ಬರು ವಿಷಯ ಮುಟ್ಟಿಸಿದರು. ತಕ್ಷಣ ಪಿಎಸ್‌ಐ ಸಂತೋಷಕುಮಾರ್ ತಮ್ಮ ಸಿಬ್ಬಂದಿ ಜೊತೆ ಹೆಗಡೆ ಮನೆ ಬಾಗಿಲು ತಟ್ಟಿದರು.
ಇಸ್ಪಿಟ್ ಆಡುತ್ತಿದ್ದ 13 ಜನ ಅಲ್ಲಿಯೇ ಸಿಕ್ಕಿಬಿದ್ದರು. ಎಲ್ಲರನ್ನು ವಶಕ್ಕೆ ಪಡೆದು ಹರಡಿಕೊಂಡಿದ್ದ 54900ರೂ ಹಣವನ್ನು ಜಪ್ತು ಮಾಡಿದರು. 7 ಮೊಬೈಲ್ ಸಹ ಅಲ್ಲಿ ಸಿಕ್ಕಿದವು. ಕಾನೂನುಬಾಹಿರ ಆಟವಾಡಿದ ಕಾರಣ ಆ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿದರು.