
ಕಾರವಾರದ ರೋಹಿದಾಸ ಕಾಂಬ್ಳೆ ಅವರಿಗೆ ಅಂಗಡಿ ನಡೆಸಲು ಸಮಸ್ಯೆ
News Details
ಕಾರವಾರದ ಅರ್ಜುನಕೋಟದ ಮಾಜಿ ಸೈನಿಕ ರೋಹಿದಾಸ ಕಾಂಬ್ಳೆ ಅವರು ಇದೀಗ ಸಮಸ್ಯೆ ಸಿಲುಕಿದ್ದಾರೆ. ಪಂಚಾಯತದಿoದ ಅನುಮತಿಪಡೆದು ಅಂಗಡಿ ನಡೆಸುತ್ತಿದ್ದರೂ ಅವರಿಗೆ ಕೆಲವರು ಸಮಸ್ಯೆ ಮಾಡುತ್ತಿದ್ದಾರೆ.
ಈ ಬಗ್ಗೆ ಅವರು ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾರೆ. `ದುರುದ್ದೇಶದಿಂದ ನನಗೆ ಕೆಲವರು ತೊಂದರೆ ಮಾಡುತ್ತಿದ್ದಾರೆ' ಎಂದವರು ದೂರಿದ್ದಾರೆ. `ಭಾರತೀಯ ಸೈನ್ಯದಿಂದ ನಿವೃತ್ತಿಯಾದ ಬಳಿಕ ಜೀವನೋಪಾಯಕ್ಕೆ ತಾಲೂಕಿನ ಸದಾಶಿವಗಡದ ದೇಸಾಯಿವಾಡದ ಪಿಡಬ್ಲುಡಿ ಮೇನ್ ರೋಡಿನಲ್ಲಿ ಚಿಕ್ಕದಾಗಿ ಅಂಗಡಿ ಹಾಕಿಕೊಂಡಿದ್ದೇನೆ. ಇದಕ್ಕೆ ಸ್ಥಳೀಯ ಗ್ರಾಪಂನಿAದ ಅನುಮತಿ ಪಡೆಯಲಾಗಿದೆ. ಈಚೆಗೆ ಕೆಲವರು ತಮಗೆ ಅಂಗಡಿ ನಡೆಸಲು ಬಿಡುತ್ತಿಲ್ಲ. ಕಳೆದ ತಿಂಗಳು ಅಂಗಡಿಯ ಗೋಡೆಗೆ, ಸಿಮೆಂಟ್ ಶೀಟಿಗೆ ಹಾನಿ ಮಾಡಿದ್ದಾರೆ' ಎಂದವರು ನೋವು ತೋಡಿಕೊಂಡರು.
`ಕಿಡಿಗೇಡಿಗಳು ಅಂಗಡಿ ಎದುರಿನ ಗಟಾರವನ್ನು ಮುಚ್ಚಿದ್ದಾರೆ. ಮಳೆಗಾಲದಲ್ಲಿ ನೀರೆಲ್ಲ ಅಂಗಡಿಗೆ ನುಗ್ಗುತ್ತಿದೆ. ಈ ಬಗ್ಗೆ ಈಗಾಗಲೇ ಪೊಲೀಸ್ ದೂರು ನೀಡಲಾಗಿದೆ. ಉದ್ದೇಶ ಪೂರ್ವಕವಾಗಿ ತೊಂದರೆ ನೀಡುತ್ತಿರುವವರು ಅಂಗಡಿಯನ್ನೂ ಬಂದ್ ಮಾಡಿದರೆ ಜೀವನೋಪಾಯಕ್ಕೆ ದಾರಿಯಿಲ್ಲ' ಎಂದು ತಮ್ಮ ಸಮಸ್ಯೆ ವಿವರಿಸಿದರು.