
0:00:00
2025-04-10
ಜಾನುವಾರು ಹಿಂಸಾತ್ಮಕ ಸಾಗಣೆ : ಟ್ರ್ಯಾಕ್ಟರ್ ಸಹಿತ ಆರೋಪಿ ವಶ
News Details
ಶಿರಸಿ : ಯಾವುದೇ ಪರವಾನಗಿ ಇಲ್ಲದೆ 2 ಜಾನುವಾರುಗಳನ್ನು ಇಕ್ಕಟ್ಟಾದ ರೀತಿಯಲ್ಲಿ ಕಟ್ಟಿ, ಆಹಾರ ನೀಡದೆ ಟ್ರ್ಯಾಕ್ಟರ್ ನಲ್ಲಿ ಸಾಗಿಸುತ್ತಿದ್ದ ಆರೋಪಿ ಮಂಜು ವಿ ಚನ್ನಯ್ಯ ಸಾ : ದನಗನಹಳ್ಳಿ ತಾ : ಶಿರಸಿ ಎಂಬಾತನನ್ನು ನಗರದ ವಿವೇಕಾನಂದ ನಗರ ರಸ್ತೆ ಯಲ್ಲಿ ವಶಕ್ಕೆ ಪಡೆದು ನ್ಯೂ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಟ್ರ್ಯಾಕ್ಟರ್ ಸಮೇತ ಆರೋಪಿಯನ್ನು ಬಂಧಿಸಿ ಪಿಎಸ್ಐ ರಾಜಕುಮಾರ ಉಕ್ಕಲಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.