
ಬನವಾಸಿ : ಮಾಂಗಲ್ಯ ದರೋಡೆ : ಇಬ್ಬರು ದರೋಡೆ ಕೋರರ ಬಂಧನ
News Details
ಶಿರಸಿ : ಮಾರ್ಚ್ 30 ರಂದು ಹಳೆ ಬಟ್ಟೆ ಖರೀದಿಸುವ ನೆಪದಲ್ಲಿ ಮನೆಗೆ ಬಂದು ನೀರು ಬೇಕೆಂದು ಹೇಳಿ ಗಂಡ ನೀರು ತರಲು ಒಳ ಹೋದಾಗ ವೃದ್ಧೆ ಯೊಬ್ಬಳ ಮಾಂಗಲ್ಯ ಸರ ದರೋಡೆ ಮಾಡಿಕೊಂಡು ಹೋದ ಇಬ್ಬರು ಕಿರಾತಕರನ್ನು ಬಂಧಿಸುವಲ್ಲಿ ಬನವಾಸಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.
ಇಬ್ಬರು ದರೋಡೆಕೋರರು ಮಾರುತಿ ಒಮಿನಿಯಲ್ಲಿ ಬಂದು 25 ಗ್ರಾಂ ಚಿನ್ನದ ಸರ ದೋಚಿದ್ದ ಬಗ್ಗೆ ಶಿರಸಿ ತಾಲೂಕ ಬನವಾಸಿಯ ಸೊರಬ ರಸ್ತೆ ನಿವಾಸಿ ನಿವೃತ್ತ ಅಂಗನವಾಡಿ ಶಿಕ್ಷಕಿ ಶೈಲಾ ಕೋಂ ಆನಂದ ಮಂಗಳೂರು ಇವರು ಬನವಾಸಿ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಾದ ನಂತರ ಆರೋಪಿಗಳ ಪತ್ತೆಹಚ್ಚಲು ಪೊಲೀಸ್ ತಂಡ ರಚನೆ ಮಾಡಲಾಗಿತ್ತು .
ಬನವಾಸಿ ಪೊಲೀಸ್ ಠಾಣೆ ಪಿಎಸ್ಐ ಗಳಾದ ಚಂದ್ರಕಲಾ ಪತ್ತಾರ್ ಮತ್ತು ಸುನಿಲ್ ಕುಮಾರ್ ಇವರ ನೇತೃತ್ವದಲ್ಲಿ ಆರೋಪಿಗಳಾದ ಶಿವಮೊಗ್ಗ ಗಾಡಿಕೊಪ್ಪ ಗ್ರಾಮದ ಪಾತ್ರೆ ವ್ಯಾಪಾರ ಮಾಡುವ ಚೇತನ್ ಪಿ ಗಾಯಕವಾಡ(30) ಮತ್ತು ಶಿವಮೊಗ್ಗ ಎಸ್ ಕೆ ಎಂ ರಸ್ತೆ ನಿವಾಸಿ ಪಾತ್ರೆ ವ್ಯಾಪಾರಿ ಅರ್ಜುನ್ ಶ್ರೀರಾಮ್ ಶಿಂದೆ ಇವರನ್ನು ದಿನಾಂಕ 6-04- 2025 ರಂದು ವಶಕ್ಕೆ ಪಡೆದು ಠಾಣೆಗೆ ತಂದು ಬಂಧಿಸಿದ್ದಾರೆ. ಅಲ್ಲದೆ ಆರೋಪಿಗಳು ಕ್ರತ್ಯಕ್ಕೆ ಬಳಸಿದ ಮಾರುತಿ ಒಮಿನಿ ಹಾಗೂ ದರೋಡೆಗೈದ 22 ಗ್ರಾಮ ಚಿನ್ನದ ಸರ ವಶಪಡಿಸಿಕೊಂಡಿದ್ದಾಗಿ ಪೊಲೀಸ್ ಪ್ರಕಟಣೆ ತಿಳಿಸಿದೆ.