
0:00:00
2025-04-10
ಕೇರಂ ಬೋರ್ಡ್ ಅಡಿಯಿಂದ ನಾಗರ ಹಾವು ಪತ್ತೆ – ಮಹೇಶ ನಾಯ್ಕ ಸೆರೆ ಹಿಡಿದು ಕಾಡಿಗೆ ಬಿಡಿಕೆ
News Details
ಕೇರಂ ಬೋರ್ಡಿನ ಅಡಿ ಅಡಗಿದ್ದ ನಾಗರ ಹಾವನ್ನು ಅವರ್ಸಾದ ಮಹೇಶ ನಾಯ್ಕ ಅವರು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಅಂಕೋಲಾ ತಾಲೂಕಿನ ಪುಜಗೇರಿಯಲ್ಲಿ ಗಾಂವಕರ ಮನೆಗೆ ಹಾವು ಬಂದಿತ್ತು. ಇದರಿಂದ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದರು. ಹಾವು ಬಂದ ವಿಷಯವನ್ನು ಊರಿನ ಪ್ರಮುಖರಾದ ರವಿ ಗಾಂವಕರ ಮತ್ತು ರತ್ನಾಕರ ಗಾಂವಕರ ಅವರು ಮಹೇಶ ನಾಯ್ಕರಿಗೆ ತಿಳಿಸಿದರು.
ಕೇರಂ ಬೋಡಿನ ಅಡಿಗೆ ಅವಿತಿದ್ದ ಹಾವನ್ನು ಮಹೇಶ ನಾಯ್ಕರು ಉಪಾಯವಾಗಿ ಹಿಡಿದರು. ಹೆಡೆ ಎತ್ತಿ ಬುಸ್ ಎಂದ ಹಾವನ್ನು ಅವರು ಹಂತ ಹಂತವಾಗಿ ಪಳಗಿಸಿ ಸಮಾಧಾನ ಮಾಡಿದರು. ಹಾವನ್ನು ಚೀಲದಲ್ಲಿ ತುಂಬಿದ ಮಹೇಶ ನಾಯ್ಕರು ಅದನ್ನು ಕಾಡಿಗೆ ಬಿಟ್ಟರು.